ಸಂಗ್ರಹ ಚಿತ್ರ 
ದೇಶ

ಭಾರತೀಯ ಸೇನೆಯ ಕೈ ಸೇರಿದ ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್!

ಭಾರತೀಯ ಸೇನೆಯ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್ ಸೈನಿಕರ ಕೈ ಸೇರಿದೆ.

ನವದೆಹಲಿ: ಭಾರತೀಯ ಸೇನೆಯ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್ ಸೈನಿಕರ ಕೈ ಸೇರಿದೆ.

ಹೌದು.. ಸುಮಾರು 15 ವರ್ಷಗಳ ಬಳಿಕ ಭಾರತೀಯ ಸೇನೆಗೆ ಅಮೆರಿಕ ನಿರ್ವಿುತ ಹೊಸ ಎಸ್​ಐಜಿ-716 ಅಸಾಲ್ಟ್ ರೈಫಲ್ ಪೂರೈಕೆಯಾಗುತ್ತಿದೆ. ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿರುವ ಈ ರೈಫಲ್​ಗಳನ್ನು ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿನ ಮುಂಚೂಣಿ ನೆಲೆಗಳಲ್ಲಿರುವ ಸೈನಿಕರಿಗೆ ಮಾತ್ರ ಮೀಸಲಾಗಿಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಉಳಿದ ಸೈನಿಕರಿಗೆ ರಷ್ಯಾ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿರುವ ಕಲಾಶ್ನಿಕೋವ್ ರೈಫಲ್​ಗಳನ್ನು ನಂತರದ ಹಂತದಲ್ಲಿ ನೀಡಲಾಗುತ್ತದೆ. ಪ್ರಸ್ತುತ ಬಳಕೆಯಲ್ಲಿರುವ 5.56 ಎಂಎಂ ಇನ್ಸಾಸ್ ರೈಫಲ್​ಗಳನ್ನು ಬದಲಿಸಲು ಸೇನೆ 2005ರಲ್ಲಿ ಬೇಡಿಕೆ ಇಟ್ಟಿತ್ತು. 382 ಬೆಟಾಲಿಯನ್​ಗಳಿಗೆ (ಪ್ರತಿಯೊಂದರಲ್ಲು 850 ಸೈನಿಕರಿರುತ್ತಾರೆ) ಅತ್ಯಾಧುನಿಕ ಗನ್​ಗಳನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಭ್ರಷ್ಟಾಚಾರ ಆರೋಪಗಳು ಸೇರಿ ಅನೇಕ ಅಡಚಣೆಗಳಿಂದ ರೈಫಲ್​ಗಳ ಖರೀದಿ ಒಪ್ಪಂದ ವಿಳಂಬವಾಯಿತು.

ಈಗ 15 ವರ್ಷಗಳ ಬಳಿಕ ಈ ರೈಫಲ್ಸ್ ಸೇನೆ ಕೈಸೇರುತ್ತಿವೆ. ನಿರ್ಣಾಯಕ ಕಾರ್ಯಾಚರಣೆಗಳ ಅವಶ್ಯಕತೆಗಳಿಗಾಗಿ ಭಾರತ ಅಮೆರಿಕದ ಎಸ್​ಐಜಿ ಸೌರ್ ಸಂಸ್ಥೆಯಿಂದ 72,400 ಅಸಾಲ್ಟ್ ರೈಫಲ್ಸ್​ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ 10 ಸಾವಿರ ಎಸ್​ಐಜಿ-716 ರೈಫಲ್ಸ್ ಸೇನೆ ಈಗಾಗಲೇ ಸ್ವೀಕರಿಸಿದೆ. ಬಾಕಿ ರೈಫಲ್ ಗಳು ಕಾಲಾನುಕ್ರಮದಲ್ಲಿ ಹಂತಹಂತವಾಗಿ ಸೈನಿಕರ ಕೈ ಸೇರಲಿವೆ ಎಂದು ಸೇನಾಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

SCROLL FOR NEXT