ದೇಶ

ಮಹಾರಾಷ್ಟ್ರದಲ್ಲಿ ಬಂಧನ ಕೇಂದ್ರಗಳಿರುವುದಿಲ್ಲ, ಮುಸ್ಲಿಮರು ಹೆದರಬೇಕಿಲ್ಲ: ಸಿಎಂ ಉದ್ಧವ್ ಠಾಕ್ರೆ 

Srinivas Rao BV

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಸ್ಲಿಮರಿಗೆ ಭರವಸೆ ನೀಡಿದ್ದಾರೆ. 

ತಮ್ಮನ್ನು ಭೇಟಿ ಮಾಡಿದ ಮುಸ್ಲಿಂ ಶಾಸಕರ ನಿಯೋಗಕ್ಕೆ ಸಿಎಂ ಉದ್ಧವ್ ಠಾಕ್ರೆ ಭರವಸೆ ನೀಡಿದ್ದು, ರಾಜ್ಯದಲ್ಲಿ ಬಂಧನ ಕೇಂದ್ರಗಳಿರುವುದಿಲ್ಲ ಎಂದು ಹೇಳಿದ್ದಾರೆ. 

ಎನ್ ಸಿಪಿಯ ಶಾಸಕ ನವಾಬ್ ಮಲೀಕ್ ನೇತೃತ್ವದ ನಿಯೋಗದೊಂದಿಗೆ ಉದ್ಧವ್ ಠಾಕ್ರೆ ಮಾತನಾಡಿದ್ದು, ತಮ್ಮ ಆಡಳಿತಾವಧಿಯಲ್ಲಿ ಮುಸ್ಲಿಂ ಪ್ರಜೆಗಳು ಭಯಪಡಬೇಕಿಲ್ಲ ಎಂದಿದ್ದಾರೆ. 

ನವಿ ಮುಂಬೈ ಹಾಗೂ ಖಾರ್ ಘರ್ ನಲ್ಲಿ ಬಂಧನ ಕೇಂದ್ರಗಳನ್ನು ತೆರೆದಿರುವುದು ಡ್ರಗ್ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಗಳಿಗಾಗಿಯೇ ಹೊರತು ಬೇರೆಯದ್ದಕ್ಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

SCROLL FOR NEXT