ದೇಶ

ಪೌರತ್ವ ತಿದ್ದುಪಡಿ ಕಾಯ್ದೆಯಡಿ ಕನೇರಿಯಾ ಭಾರತಕ್ಕೆ ಬರಬಹುದು-ಯುಪಿ ಸಚಿವ ಮೊಹ್ಸಿನ್ ರಾಜಾ

Nagaraja AB

ಲಖನೌ: ಪಾಕಿಸ್ತಾನದ  ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅಲ್ಲಿ ತಾರತಮ್ಯಕ್ಕೊಳಗಾಗಿದ್ದರೆ  ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತಕ್ಕೆ ಮುಕ್ತವಾಗಿ ಬರಬಹುದು  ಎಂದು ಉತ್ತರ ಪ್ರದೇಶದ ಸಚಿವ ಮೊಹ್ಸಿನ್ ರಾಜಾ ಹೇಳಿದ್ದಾರೆ.

ಪಾಕಿಸ್ತಾನದ ಮತ್ತೊಬ್ಬ ಆಟಗಾರ ಮೊಹಮ್ಮದ್ ಯೂಸಫ್ ಕೂಡಾ ಅದೇ ರೀತಿಯ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಅವರು ಕ್ರಿಶ್ಚಿಯನ್ ಆಗಿದ್ದು, ನಿಜವಾದ ಹೆಸರು ಯೂಸಫ್ ಯುಹಾನಾ ಆಗಿದೆ ಎಂದು ರಾಜಾ ತಿಳಿಸಿದ್ದಾರೆ. 

ಡ್ಯಾನಿಶ್ ಕನೇರಿಯಾ ಅವರ ಮೂಲ ಹೆಸರು ದಿನೇಶ್ ಕನೇರಿಯಾ. ಆದರೆ, ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆಯುವ ಸಲುವಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮೊಹಮ್ಮದ್ ಯೂಸಫ್ ಕೂಡಾ ಅದೇ ರೀತಿಯಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಅವರು ಭಾರತಕ್ಕೆ ಬರಬಹುದಾಗಿದೆ. ಅವರನ್ನು ನಾವು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.

ಹಿಂದೂವಾಗಿರುವ ಕಾರಣಕ್ಕೆ  ಕನೇರಿಯಾ ಅವರನ್ನು ಪಾಕಿಸ್ತಾನ ತಂಡದ ಭಾಗವಾಗಲು ಇಷ್ಟಪಡದ ಅನೇಕರು ಇದ್ದಾರೆ ಎಂದು ಪಿಟಿವಿ ಕಾರ್ಯಕ್ರಮದ "ಗೇಮ್ ಆನ್ ಹೈ" ಶೀರ್ಷಿಕೆಯ ಸಂದರ್ಶನವೊಂದರಲ್ಲಿ, ಅಖ್ತರ್   ಆರೋಪಿಸಿದ್ದರು. ಇದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿದ್ದ ಕನೇರಿಯಾ, ನನ್ನ ಜೀವನ ಉತ್ತಮ ಸ್ಥಿತಿಯಲ್ಲಿ ಇಲ್ಲ. ಈ ಅವ್ಯವಸ್ಥೆಯಿಂದ ಹೊರಬರಲು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು.

 62 ಟೆಸ್ಟ್‌ಗಳಲ್ಲಿ 261 ವಿಕೆಟ್‌ಗಳನ್ನು ಹೊಂದಿರುವ ಲೆಗ್ ಸ್ಪಿನ್ನರ್ ಕನೇರಿಯಾ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ.

SCROLL FOR NEXT