ದೇಶ

ಭಾರತದಲ್ಲಿ ಅತಿಹೆಚ್ಚು ಮಹಿಳಾ ಉದ್ಯಮಿಗಳಿರುವ ರಾಜ್ಯ ಪಶ್ಚಿಮ ಬಂಗಾಳ

Vishwanath S

ಕೋಲ್ಕತಾ: ದೇಶದಲ್ಲೇ ಅತಿಹೆಚ್ಚು ಮಹಿಳಾ ಉದ್ಯಮಿಗಳನ್ನು ಹೊಂದಿರುವ ಹೆಮ್ಮೆಗೆ ಪಶ್ಚಿಮ ಬಂಗಾಳ ಪಾತ್ರವಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರ ಸಂಖ್ಯೆಯ ದೃಷ್ಟಿಯಿಂದ ಬಂಗಾಳ ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ. ವ್ಯಾಪಾರ ಮಾಲೀಕರಾಗಿ ರಾಜ್ಯವು ಅತಿ ಹೆಚ್ಚು ಮಹಿಳೆಯರನ್ನು ಹೊಂದಿದೆ.

ಭಾರತದಲ್ಲಿನ ಸಣ್ಣ-ಪ್ರಮಾಣದ ಕೈಗಾರಿಕೆಗಳಲ್ಲಿನ ಉದ್ಯೋಗ ಅಂಕಿಅಂಶಗಳ ಕುರಿತ ವರದಿಯ ಭಾಗವಾಗಿ ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಸಿದ್ಧಪಡಿಸಿದ ವರದಿಯ ಪ್ರಕಾರ, ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ 2.65 ಕೋಟಿಯಿದ್ದು,ಅವರಲ್ಲಿ 43.51 ಲಕ್ಷ ಸಂಖ್ಯೆ ಬಂಗಾಳದಲ್ಲಿದೆ. ಮಹಿಳಾ ಉದ್ಯಮಿಗಳ ವಿಷಯದಲ್ಲೂ ಬಂಗಾಳ ದಾಖಲೆ ನಿರ್ಮಿಸಿದೆ.

ರಾಜ್ಯದಲ್ಲಿ ಸುಮಾರು 29 ಲಕ್ಷ ಮಹಿಳೆಯರು ತಮ್ಮದೇ ಆದ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಉದ್ಯಮಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸ್ವ-ಸಹಾಯ ಗುಂಪುಗಳು ಪ್ರಮುಖ ಪಾತ್ರ ವಹಿಸಿವೆ.

SCROLL FOR NEXT