ದೇಶ

2020 ಹೊಸ ವರ್ಷ, ತ್ರಿವಳಿ ತಲಾಖ್ ಸಂತ್ರಸ್ತರಿಗೆ ಉತ್ತರ ಪ್ರದೇಶ ಸರ್ಕಾರದಿಂದ ಹೊಸ ಭರವಸೆ! 

Srinivas Rao BV

ನವದೆಹಲಿ: ತ್ರಿವಳಿ ತಲಾಖ್ ಸಂತ್ರಸ್ತರಿಗೆ ಉತ್ತರ ಪ್ರದೇಶ ಸರ್ಕಾರ ಹೊಸ ವರ್ಷಕ್ಕೆ ಹೊಸ ಭರವಸೆ ಮೂಡುವಂತಹ ಯೋಜನೆಯನ್ನು ಘೋಷಿಸಿದೆ. 

ಸಿಎಂ ಯೋಗಿ ಆದಿತ್ಯನಾಥ್ ಹೊಸ ಯೋಜನೆಯೊಂದನ್ನು ಘೋಷಿಸಿದ್ದು, ಸಂತ್ರಸ್ತರಿಗೆ ಪುನರ್ವಸತಿ ಲಭಿಸುವವರೆಗೂ ಈ ಯೋಜನೆಯಡಿಯಲ್ಲಿ ವಾರ್ಷಿಕ 6,000 ರೂಪಾಯಿ ಆರ್ಥಿಕ ನೆರವು ದೊರೆಯುತ್ತದೆ. ಅಷ್ಟೇ ಅಲ್ಲದೇ ಸರ್ಕಾರದಿಂದ ಉಚಿತ ಕಾನೂನು ನೆರವೂ ಸಹ ದೊರೆಯಲಿದೆ. 

ಉಚಿತ ಆರ್ಥಿಕ ನೆರವು, ಕಾನೂನು ನೆರವು ನೀಡುವ ಸೌಲಭ್ಯ 2020 ರಿಂದ ಜಾರಿಗೊಳ್ಳಲಿದೆ. ಇದು ಕೇವಲ ತ್ರಿವಳಿ ತಲಾಖ್ ಸಂತ್ರಸ್ತರಿಗೆ ಮಾತ್ರವಲ್ಲದೇ, ಮುಂದಿನ ದಿನಗಳಲ್ಲಿ ವಿಚ್ಛೇದನ ಪಡೆದಿರುವ ಎಲ್ಲಾ ಧರ್ಮದವರಿಗೂ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. 

SCROLL FOR NEXT