ದೇಶ

ವರ್ಷಕ್ಕೆ 100 ದಿನ ಕುಟುಂಬದೊಂದಿಗಿರಲು ಸಿಆರ್‌ಪಿಎಫ್‌ ಯೋಧರಿಗೆ ಅವಕಾಶ: ಅಮಿತ್ ಶಾ

Srinivasamurthy VN

ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ ಜವಾನರು ತಮ್ಮ ಕುಟುಂಬದೊಂದಿಗೆ ವರ್ಷಕ್ಕೆ 100 ದಿನಗಳ ಕಾಲ ಇರಲು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಕಾರ್ಡ್‌ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

ಇಲ್ಲಿ ಸಿಆರ್‌ಪಿಎಫ್‌ನ ಹೊಸ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸೇನೆಯ ಕೇಡರ್ ಪರಿಶೀಲನೆಯ ನಂತರ ಸುಮಾರು 3,526 ಹುದ್ದೆಗಳನ್ನು ಸೃಷ್ಟಿಸಲಾಗಿದ್ದು, ಇದು ಮುಂದಿನ ದಿನಗಳಲ್ಲಿ ಸೇನೆಯ ಸಿಬ್ಬಂದಿಗೆ ತ್ವರಿತ ಬಡ್ತಿ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದರು.

ಸಿಆರ್‌ಪಿಎಫ್ ‘ವೀರ್-ಆ್ಯಪ್’, ಹುತಾತ್ಮರ ಕುಟುಂಬಗಳನ್ನು ನೋಡಿಕೊಳ್ಳಲಿದ್ದು, ಈ ಆ್ಯಪ್ ಮೂಲಕ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಇನ್ನು ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದಂತೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಸಿಆರ್‌ಪಿಎಫ್ ಹೆಚ್ಚುವರಿ ನಿರ್ದೇಶಕ ಅತುಲ್ ಕರ್ವಾಲ್ ನೇತೃತ್ವದಲ್ಲಿ 7 ಮಂದಿ ಸಮಿತಿ ರಚಿಸಲಾಗಿದ್ದು, ಪ್ರತೀ ಕೇಂದ್ರ ಶಸ್ತ್ರಾಸ್ತ್ರ ದಳದ ಒಬ್ಬರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. 4 ವಾರದೊಳಗೆ ವರದಿ ನೀಡಲು ಸೂಚಿಸಲಾಗಿದ್ದು, ಇದು ಜಾರಿ ಆದರೆ, 7 ಲಕ್ಷ ಯೋಧರಿಗೆ ಉಪಯೋಗವಾಗಲಿದೆ.

SCROLL FOR NEXT