ದೇಶ

'ಭಾರತ್ ಮಾತಾ ಕೀ ಜೈ' ಹೇಳುವವರು ಮಾತ್ರ ದೇಶದಲ್ಲಿರಬಹುದು, ಇಲ್ಲದಿದ್ದರೆ?: ಧರ್ಮೇಂದ್ರ ಪ್ರಧಾನ್

Vishwanath S

ಪುಣೆ: ಭಾರತ್ ಮಾತಾ ಕೀ ಜೈ ಎಂದು ಹೇಳುವವರಿಗೆ ಮಾತ್ರ ಭಾರತದಲ್ಲಿರಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಇಂದನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ಎಬಿವಿಪಿಯ 54ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿಲ್ಲ ಎಂದು ಭಾವಿಸಿ ಕೆಲವರು ಭಾರತವನ್ನು ಧರ್ಮಶಾಲೆ ಮಾಡಲು ಹೊರಟಿದ್ದಾರೆ ಎಂದರು. 

ಇಲ್ಲಿ ಯಾರೇ ಬಂದು ನೆಲೆಸಬಹುದು. ಅದನ್ನು ನಾವು ಸವಾಲು ಸ್ವೀಕರಿಸಲು ಸಿದ್ದರಿದ್ದೇವೆ. ಆದರೆ ಭಾರತದಲ್ಲಿ ಇರಲು ಬಯಸುವವರು ಭಾರತ್ ಮಾತಾ ಕೀ ಜೈ ಎಂದು ಹೇಳುವುದನ್ನು ಕಡ್ಡಾಯಗೊಳಿಸಬೇಕಿದೆ. ನಾವು ಇದನ್ನು ಸ್ಪಷ್ಟಪಡಿಸಬೇಕು, ಅಂತಹವರಿಗೆ ಮಾತ್ರ ಭಾರತದಲ್ಲಿರಲು ಅವಕಾಶ ನೀಡಬೇಕಿದೆ ಎಂದು ತಿಳಿಸಿದ್ದಾರೆ.

SCROLL FOR NEXT