ದೇಶ

ದೇಶದ ಅರಣ್ಯ ವರದಿ ಬಿಡುಗಡೆ ಮಾಡಿದ ಜಾವಡೇಕರ್‌; ಅರಣ್ಯ ವೃದ್ಧಿಯಲ್ಲಿ ಕರ್ನಾಟಕ ಪ್ರಥಮ

Nagaraja AB

ನವದೆಹಲಿ: ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಸೋಮವಾರ 'ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್'- 2019 ಅನ್ನು ಬಿಡುಗಡೆ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು, ಭಾರತವು 2.5 ಬಿಲಿಯನ್ ಟನ್ ಇಂಗಾಲಕ್ಕೆ ಸಮನಾದ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಹೇಳಿದರು.

ದೇಶದ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುವ ಭಾರತ ಅರಣ್ಯ ಸಮೀಕ್ಷೆಯ ಈ ವರದಿಯಲ್ಲಿ,  3,976 ಚದರ ಕಿ.ಮೀ (ಶೇಕಡಾ 0.56 ) ಅರಣ್ಯ ವ್ಯಾಪ್ತಿ, 1,212 ಚದರ ಕಿ.ಮೀ (ಶೇಕಡಾ1.29 ) ಮರದ ಹೊದಿಕೆ ಹೆಚ್ಚಳವಾಗಿದೆ ಎಂದು  ತಿಳಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದ ಕೆಲವು ಭಾಗಗಳಲ್ಲಿ ಅರಣ್ಯ ವೃದ್ಧಿಯಾಗಿದ್ದು, ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಜಮ್ಮು- ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಅರಣ್ಯ ವೃದ್ದಿಯಾಗಿರುವುದಾಗಿ ಅವರು ತಿಳಿಸಿದರು. 

SCROLL FOR NEXT