ದೇಶ

ಶಬರಿಮಲೆ ವಿವಾದ: ಪಿಣರಾಯ್ ವಿಜಯನ್ ನಿಲುವು ಸರಿ- ನಟ ವಿಜಯ್ ಸೇತುಪತಿ

Nagaraja AB

ಚೆನ್ನೈ: ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ  ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ನಿಲುವನ್ನು  ಕಾಲಿವುಡ್ ನಟ  ವಿಜಯ್  ಸೇತುಪತಿ ಶ್ಲಾಘಿಸಿದ್ದಾರೆ.  ನಾನೂ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

ಟವಿ ಶೋ ವೊಂದರಲ್ಲಿ ಪಿಣರಾಯ್ ವಿಜಯನ್ ಜೊತೆಗೆ ವೇದಿಕೆ ಹಂಚಿಕೊಂಡಿರುವ ವಿಜಯ್ ಸೇತುಪತಿ,  ಕೇರಳ ಮುಖ್ಯಮಂತ್ರಿ ಯಾವಾಗಲೂ ಶಾಂತ ಸ್ವಭಾವದಿಂದ ಇರುವ ಪ್ರಬುದ್ಧ ವ್ಯಕ್ತಿಯಾಗಿದ್ದಾರೆ. ಹೆಡ್ ಮಾಸ್ಟರ್ ರೀತಿಯಲ್ಲಿ ವೇದಿಕೆಗೆ ಆಗಮಿಸುತ್ತಾರೆ. ಅವರು ನಡೆದು ಹೋಗುವಾಗ ನಿಶಬ್ದ ವಾತವಾರಣವಿರುತ್ತದೆ ಎಂದು ಹೊಗಳಿದ್ದಾರೆ.

ವೇದಿಕೆಯಲ್ಲಿದ್ದಾಗ ನನ್ನ ಕಡೆ ತಿರುಗಿ ಏಕೆ ಮೊದಲು ಮಾತನಾಡಲಿಲ್ಲ ಎಂಬುದನ್ನು ಕೇಳಿ ನಿಜಕ್ಕೂ ಆಶ್ಚರ್ಯವಾಯಿತು. ಶಾಸಕರು ಅಥವಾ ಸಂಸದರು ಈ ರೀತಿಯ ಸಹಕಾರ ನೀಡದಿದ್ದರೂ ಮುಖ್ಯಮಂತ್ರಿ ಅವರ ಮಾತು ನಿಜಕ್ಕೂ ಬೆರಗೂ ಮೂಡಿಸಿತು ಎಂದು  ವಿಜಯ್ ಸೇತುಪತಿ ಹೇಳಿದ್ದಾರೆ.

ತಮಿಳುನಾಡು ಗಾಜಾ ಚಂಡಮಾರುತಕ್ಕೆ ತುತ್ತಾದ ಸಂದರ್ಭದಲ್ಲಿ ಕೇರಳದಲ್ಲಿ ಸಂಕಷ್ಟವಿದ್ದರೂ 10  ಕೋಟಿ ರೂಪಾಯಿ ಪರಿಹಾರ ಹಣ ಒದಗಿಸಿದ್ದಾರೆ. ಇದನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಎಂದು ಹೊಗಳಿದ್ದಾರೆ.

ಋತುಚಕ್ರದ ಕಾರಣ ಮಹಿಳೆಯರನ್ನು "ಅಶುದ್ಧ" ಎಂದು ವರ್ಣಿಸುವ ವಾದವನ್ನು ಸೂಪರ್ ಸ್ಟಾರ್ ಪ್ರಶ್ನಿಸಿದ್ದಾರೆ. ಶಬರಿಮಲೆ ವಿವಾದದಲ್ಲಿ ಕೇರಳ ಮುಖ್ಯಮಂತ್ರಿ ನಿಲುವು ಸರಿಯಾದದ್ದು ಎಂದಿದ್ದಾರೆ.
ಮಹಿಳೆಯರು ಪ್ರತಿ ತಿಂಗಳು ಋತುಚಕ್ರದ ಕಾರಣ ತೊಂದರೆ ಎದುರಿಸುವುದು ಸಾಮಾನ್ಯ. ಅದು ಏಕೆ ಉಂಟಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದಿದ್ದೇವೆ. ಅದು ಪವಿತ್ರವಾದದ್ದು ಅದರಿಂದಲೇ ನಾವೆಲ್ಲಾ ಭೂಮಿ ಮೇಲೆ ಇದ್ದೇವೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ವಿಜಯ್ ಸೇತುಪತಿ ಹೇಳಿದ್ದಾರೆ.
SCROLL FOR NEXT