ನವದೆಹಲಿ: ಕಳೆದ ತಿಂಗಳು ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು, ಅದಾದ ನಂತರ ವಿದೇಶ ಪ್ರವಾಸಕ್ಕೆ ತೆರಳಿದ್ದ ಪ್ರಿಯಾಂಕಾ ಸೋಮವಾರ ವಾಪಾಸಾಗಿದ್ದಾರೆ.
ವಿದೇಶ ಪ್ರವಾಸದಿಂದ ಆಗಮಿಸಿರುವ ಪ್ರಿಯಾಂಕಾ ತುಘಲಕ್ ರಸ್ತೆಯಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿ ತಮ್ಮ ಸಹೋದರನನ್ನು ಭೇಟಿಯಾಗಿದ್ದಾರೆ,
ಕೇವಲ ರಾಹುಲ್ ಗಾಂಧಿ ಮಾತ್ರವಲ್ಲದೇ ಉತ್ತರ ಪ್ರದೇಶದ ಹಲವು ಕಾಂಗ್ರೆಸ್ ಮುಖಂಡರನ್ನು ಕೂಡ ಬೇಟಿಯಾಗಿ ಚರ್ಚಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗಾಗಿ ಕೈಗೊಂಡಿರುವ ಕಾರ್ಯ, ಅಭಿವೃದ್ಧಿ ಕೆಲಸ ಮುಂತಾದವುಗಳ ಬಗ್ಗೆ ಚರ್ಚಿಸಿರವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇನ್ನೂ ಗುರುವಾರ ನಡೆಯುವ ಮತ್ತೊಂದು ಸಭೆಯಲ್ಲಿ ಪ್ರಿಯಾಂಕಾ ಪಾಲ್ಗೊಳ್ಳಲಿದ್ದಾರೆ.