ದೇಶ

ಲೋಕಸಭೆ ಚುನಾವಣೆ: ಮಕ್ಕಳ್ ನೀಧಿ ಮಯ್ಯಂ ಪಕ್ಷ ಸ್ವತಂತ್ರ ಸ್ಪರ್ಧೆ, ಕಮಲ್ ಹಾಸನ್ ಘೋಷಣೆ

Raghavendra Adiga
ಕೊಯಮತ್ತೂರ್: ನಟ, ರಾಜಕಾರಣಿ ಕಮಲ್ ಹಾಸನ್ ಅವರ ಹೊಸ ರಾಜಕೀಯ ಪಕ್ಷ 'ಮಕ್ಕಳ್ ನೀಧಿ ಮಯ್ಯಂ' ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಇದೇ ವೇಳೆ ಅವರು ತಮ್ಮ  ಪಕ್ಷ ಯಾವುದೇ ರಾಜಕೀಯ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
"ನಾವು ಸ್ವಚ್ಚ ಕೈಗಳಿಂದ ಜನರಿಗೆ ಉತ್ತಮ ಸೇವೆಯನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ, ಯಾವುದೇ ದ್ರಾವಿಡ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇವೆ" ಕಮಲ್ ಹಾಸನ್ ಹೇಳಿದ್ದಾರೆ.
ತಮ್ಮ ಪಕ್ಷ ತಮಿಳುನಾಡಿನಲ್ಲಿ 39 ಲೋಕಸಭಾ ಸ್ಥಾನಗ ಹಾಗೂ ನೆರೆಯ ಪುದುಚೇರಿಯಲ್ಲಿ ಕೂಡ ಸ್ಪರ್ಧಿಸಲಿದೆ.ಎಂದು ಅವರು ಸ್ಪಷ್ಟಪಡಿಸಿದ್ದಾರೆ. 
ಇದಕ್ಕೆ ಮುನ್ನ ಅವರು ತಮ್ಮ ಪಕ್ಷ ಇತರೆ ಸಮಾನ ಮನಸ್ಕ ಪಕ್ಷಗಳೊಡನೆ ಸೇರಿ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದರು.
ಜಿಲ್ಲಾ ವಿಧಾನಸಭೆ ಕ್ಷೇತ್ರ ಪೊಲ್ಲಾಚಿಯಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ಅವರು ಭಾಗವಝಿಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ್ದಾರೆ., ಚುನಾವಣೆಗಿಂತ ಮುನ್ನ ಗಮನ ನೀಡಬೇಕಾದ ಆದ್ಯತೆಯ ಕ್ಷೇತ್ರಗಳ ಬಗೆಗೆ ಚರ್ಚೆ ನಡೆದಿದೆಎಂದು ಅವರು ಹೇಳಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ಕಮಲ್ ಹಾಸನ್ ತಾವು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು.
SCROLL FOR NEXT