ದೇಶ

ಕೇರಳ ಮೀನುಗಾರರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ: ಶಶಿ ತರೂರ್ ಶಿಫಾರಸು

Shilpa D
ತಿರುವನಂತಪುರ: ಕಳೆದ ವರ್ಷ ಕೇರಳದಲ್ಲಿ  ಸಂಭವಿಸಿದ ಪ್ರವಾಹದಲ್ಲಿ ತಮ್ಮ ಜೀವದ ಹಂಗು ತೊರೆದು ಜನಸಾಮಾನ್ಯರ ಪ್ರಾಣ ಕಾಪಾಡಿದ ಮೀನುಗಾರರಿಗೆ ನೊಬೆಲ್​ ಶಾಂತಿ ಪ್ರಶಸ್ತಿ ನೀಡುವಂತೆ ಕಾಂಗ್ರೆಸ್​ನಾಯಕ ಹಾಗೂ ಸಂಸದ ಶಶಿ ತರೂರ್​ನೊಬೆಲ್​ ಸಮಿತಿಗೆ ಪತ್ರ ಬರೆದಿದ್ದಾರೆ.
ನಾರ್ವೆಯಲ್ಲಿರುವ ನೊಬೆಲ್​ ಕಚೇರಿಗೆ ಪತ್ರ ಬರೆದಿರುವ ತರೂರ್​ ಅವರು ಪ್ರವಾಹದ ಪರಿಸ್ಥಿತಿಯಲ್ಲಿ ಅಪರಿಮಿತ ಶ್ರಮ ಹಾಕಿದ ಮೀನುಗಾರರನ್ನು ಹಾಡಿ ಹೊಗಳಿದ್ದಾರೆ. 
ನೊಬೆಲ್​ಸಮಿತಿ ಮುಖ್ಯಸ್ಥ ಬೆರಿತ್​ರೈಸ್​ ಆ್ಯಂಡ್ರೂಸನ್​ಅವರನ್ನುದ್ದೇಶಿಸಿ ತರೂರ್ ಈ ಪತ್ರ ಬರೆದಿದ್ದಾರೆ.  
ಕೇರಳ ಪ್ರವಾಹದ ವೇಳೆ ತನ್ನ ಜೀವವನ್ನೇ ಪಣಕ್ಕಿಟ್ಟು ನೂರಕ್ಕೂ ಹೆಚ್ಚು ಜನರನ್ನು ತಮ್ಮ ತೆಪ್ಪದಲ್ಲಿ ಕಾಪಾಡಿದ್ದ ಜಿನೇಶ್​ಕಾರ್ಯವನ್ನು ದೇಶವೇ ಕೊಂಡಾಡಿತ್ತು. ತಮ್ಮ ಜೇಬಿನಿಂದಲೇ ದುಡ್ಡು ಖರ್ಚು ಮಾಡಿದ್ದ ಜಿನೇಶ್​ ಮತ್ತು ಇತರ ಮೀನುಗಾರರು 65,000 ಜನರನ್ನು ರಕ್ಷಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಇವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ದೇಶಾದ್ಯಂತ ಮೀನುಗಾರರ ಗುಂಪುಗಳು ಹೆಚ್ಚಿನ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಭಾಗಗಳನ್ನು ಪ್ರತಿನಿಧಿಸುತ್ತವೆ. ಕೇರಳದ ಮೀನುಗಾರರು ಇದಕ್ಕೆ ಹೊರತಾಗಿಲ್ಲ,
ಪ್ರವಾಹದ ವೇಳೆ ಅವರ ಜೀವ ರಕ್ಷಕ ಸೇವೆ ಅತ್ಯಮೂಲ್ಯವಾದದ್ದು, ಹೀಗಾಗಿ ಅವರಿಗೆ ನೊಬೆಲ್ ಶಾಂತಿ ಪಾರಿತೋಷಕ ನೀಡಬೇಕೆಂದು, ನೊಬೆಲ್ ಪ್ರಶಸ್ತಿ ನೀಡಿದರೇ ಸಮುದಾಯ ಕೃತಜ್ಞಾ ಪೂರ್ವಕವಾಗಿರುತ್ತದೆ ಎಂದು ಹೇಳಿದ್ದಾರೆ.
SCROLL FOR NEXT