ಸಂಗ್ರಹ ಚಿತ್ರ 
ದೇಶ

7 ದಿನ ಆಹಾರ, ನೀರು ತ್ಯಜಿಸಿ ಸಲ್ಲೇಖನ ಸಮಾಧಿ ಹೊಂದಿದ ಜೈನ ಮಹಿಳೆ!

ತಮಿಳುನಾಡು): 72 ವರ್ಷದ ಜೈನ ಮಹಿಳೆಯೊಬ್ಬರು ಗುರುವಾರ ಸಂಜೆ ಸಲ್ಲೇಖನ ಸಮಾಧಿಯನ್ನು ಹೊಂದಿದ್ದಾರೆ. ಸಲ್ಲೇಖನ ವ್ರತ ಕೈಗೊಂಡು ಏಳು ದಿನಗಳ....

ವೆಲ್ಲೂರು(ತಮಿಳುನಾಡು): 72 ವರ್ಷದ ಜೈನ ಮಹಿಳೆಯೊಬ್ಬರು ಗುರುವಾರ ಸಂಜೆ ಸಲ್ಲೇಖನ ಸಮಾಧಿಯನ್ನು ಹೊಂದಿದ್ದಾರೆ. ಸಲ್ಲೇಖನ ವ್ರತ ಕೈಗೊಂಡು ಏಳು ದಿನಗಳ ಬಳಿಕ ಅವರು ಈ ಭೂಮಿಯನ್ನು ಬಿಟ್ಟು ಹೊರಟಿದ್ದಾರೆ.
ರಾಜಸ್ಥಾನದಿಂಡ ಬಂದಿದ್ದ ಶ್ರೀ ಸುಗುಂತನ್ಮತಿ ಮಾತಾಜಿ ಫೆಬ್ರವರಿ 1ರಿಂದ ಸಲ್ಲೇಖನ ವ್ರತ ಪ್ರಾರಂಭಿಸಿದ್ದರು.ತಿರುವಣ್ಣಾಮಲೈ ಜಿಲ್ಲೆಯ ತಿರುಮಲೈ ಅರುಣಿ ಎಂಬಲಿನ ಅರಿಹಂತಗಿರಿ ದಿಗಂಬರ ಜೈನ ಮಠದಲ್ಲಿ ಆಕೆ ಉಪವಾಸ ವ್ರತ ಪ್ರಾರಂಭಿಸಿದ್ದರು.
ಏಳು ದಿನಗಳ ಖಾಲ ಅನ್ನ, ಆಹಾರ, ನೀರನ್ನು ಸೇವಿಸದೆ ಇದ್ದ ಆಕೆ ಗುರುವಾರ ಸಂಜೆ ಸಲ್ಲೇಖನ ಸಮಾಧಿಯಾಗಿದ್ದಾರೆ.
ಆಕೆಯ ಪರೀಕ್ಷೆ ನಡೆಸಲು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ಕರೆಸಲಾಗಿ ಆಕೆಯ ದೇಹದ ಪ್ರಮುಖ ಅಂಗಗಳ ಕಾರ್ಯವು ಸ್ಥಗಿತವಾಗಿರುವುದನ್ನು ಅವರು ಘೋಷಿಸಿದ್ದಾರೆ. ಮತ್ತು ಆ ಕಾರಣಕ್ಕೆ ಆಕೆ ಮರಣಿಸಿದರೆಂದು ವೈದ್ಯರು ಹೇಳಿದ್ದಾರೆ.
ಮೃತರ ಪಾರ್ಥಿವ ಶರೀರಕ್ಕೆ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜಿಸಿ ಬಳಿಕ ಸಮಾಧಿ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪ: 'ಕೋಟ್ಯಾಂತರ ಭಕ್ತರ ನಂಬಿಕೆಗೆ ಮಾಡಿದ ಅಪಮಾನ': ಪ್ರಧಾನಿ ಮೋದಿ ಮೌನದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಪಶ್ಚಿಮ ಬಂಗಾಳದಲ್ಲಿ ಭಾರೀ ದುರಂತ: ಹಲ್ದಿಯಾ ಪೆಟ್ರೋಕೆಮಿಕಲ್ಸ್‌ನಲ್ಲಿ ಭೀಕರ ಅಗ್ನಿ ಅವಘಡ; 20ಕ್ಕೂ ಹೆಚ್ಚು ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ..!

"ಭಾರತದ ಜಲ ಬಾಂಬ್‌ಗೆ ಪಾಕ್ ನಡುಕ": ನಮ್ಮ ಪಾಲಿನ ನೀರು ಮುಟ್ಟಿದರೆ ಆ ಕೈಗಳನ್ನೇ ಕತ್ತರಿಸುತ್ತೇವೆ- ಶತ್ರು ರಾಷ್ಟ್ರದಿಂದ ಮತ್ತೆ ಗೊಡ್ಡು ಬೆದರಿಕೆ..!

ಪಾರದರ್ಶಕ, ಪುರಾವೆ ಆಧಾರಿತ ಮತದಾರರ ಪಟ್ಟಿಗಳ ಪರಿಷ್ಕರಣೆಗೆ ರಾಜ್ಯ ಸಚಿವ ಸಂಪುಟ ಬೆಂಬಲ! ಕಳವಳವೇನು?

'One Nation, One Election' ಮಸೂದೆ ಮತ್ತಷ್ಟು ವಿಳಂಬ?: ಮುಂಗಾರು ಅಧಿವೇಶನದಲ್ಲೂ JPC ವರದಿ ಅನುಮಾನ..!