ಸಂಗ್ರಹ ಚಿತ್ರ 
ದೇಶ

ಸದ್ಯದಲ್ಲೇ ಭಾರತೀಯ ಸೈನಿಕರ ಕೈಗೆ 'ಡೆಡ್ಲಿ' ಸ್ನೈಪರ್ ರೈಫಲ್ ಗಳು!

ಪಾಕಿಸ್ತಾನ ಸೈನಿಕರ ಮತ್ತು ಅಲ್ಲಿನ ಉಗ್ರರ ಸ್ನೈಪರ್ ರೈಫಲ್ ಗಳಿಗೆ ಬಲಿಯಾಗುತ್ತಿದ್ದ ಭಾರತೀಯ ಸೈನಿಕರ ಬಹು ದಿನಗಳ ಆಸೆ ಕೊನೆಗೂ ಈಡೇರಿದ್ದು, ಇದೀಗ ಭಾರತೀಯ ಸೈನಿಕರ ಕೈಗೂ ಅತ್ಯಾಧುನಿಕ ಡೆಡ್ಲಿ ಸ್ನೈಪರ್ ರೈಫಲ್ ಗಳು ಬಂದಿವೆ.

ನವದೆಹಲಿ: ಪಾಕಿಸ್ತಾನ ಸೈನಿಕರ ಮತ್ತು ಅಲ್ಲಿನ ಉಗ್ರರ ಸ್ನೈಪರ್ ರೈಫಲ್ ಗಳಿಗೆ ಬಲಿಯಾಗುತ್ತಿದ್ದ ಭಾರತೀಯ ಸೈನಿಕರ ಬಹು ದಿನಗಳ ಆಸೆ ಕೊನೆಗೂ ಈಡೇರಿದ್ದು, ಇದೀಗ ಭಾರತೀಯ ಸೈನಿಕರ ಕೈಗೂ ಅತ್ಯಾಧುನಿಕ ಡೆಡ್ಲಿ ಸ್ನೈಪರ್ ರೈಫಲ್ ಗಳು ಬಂದಿವೆ.
ಹೌದು.. ಪಾಕ್‌ ಮೂಲದ ನುಸುಳುಕೋರ ಉಗ್ರರನ್ನು ಮತ್ತು ಅಪ್ರಚೋದಿತ ದಾಳಿ ಮಾಡುವ ಪಾಕ್ ಸೈನಿಕರ ಮಟ್ಟಹಾಕಲು ಅನುಕೂಲವಾಗುವಂತೆ ಅತ್ಯಾಧುನಿಕ ಸ್ನೈಪರ್‌ ರೈಫ‌ಲ್ ಗ‌ಳ ಬಳಕೆಯನ್ನು ಭಾರತೀಯ ಸೇನೆ ಆರಂಭಿಸಿದೆ. ಇದಕ್ಕಾಗಿ ಭಾರತ ಬೆರೆಟ್ಟಾ ಸಂಸ್ಛೆಯ  0.338 ಲಪುವಾ ಮ್ಯಾಗ್ನಮ್ ಸ್ಕಾರ್ಪಿಯೋ ಟಿಜಿಟಿ ಸೂಪರ್ ಸ್ನೈಪರ್ ರೈಫಲ್ ಮತ್ತು ಬರೆಟ್ಟ್ ಸಂಸ್ಥೆಯ 0.50 ಕ್ಯಾಲಿಬರ್ ಎಂ95 ಸ್ನೈಪರ್ ರೈಫಲ್ ಗಳನ್ನು ಖರೀದಿ ಮಾಡಿದೆ. 
ಮೂಲಗಳ ಪ್ರಕಾರ ಈ ಎರಡೂ ಮಾದರಿ ಒಟ್ಟು 5,719 ಸೂಪರ್ ಸ್ಪೈಪರ್ ರೈಫಲ್ ಗಳನ್ನು ಭಾರತ ಖರೀದಿ ಮಾಡಿದ್ದು, ಈಗಾಗಲೇ ಪಾಕಿಸ್ತಾನ ಮತ್ತು ಭಾರತ ಗಡಿ ಪ್ರದೇಶವಾಗಿರುವ ಎಲ್ ಒಸಿ (ಗಡಿ ನಿಯಂತ್ರಣ ರೇಖೆ)ಯಲ್ಲಿರುವ ಸೈನಿಕರಿಗೆ ನೀಡಲಾಗಿದೆ ಎಂದು ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಲೆಫ್ಟಿನೆಂಟ್‌ ಜನರಲ್ ರಣಬೀರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. 
ಕಳೆದ ಜನವರಿಯಲ್ಲಿ  ನಾರ್ಥರ್ನ್ ಕಮಾಂಡ್ ನ‌ ಜನರಲ್‌ ಆಫೀಸರ್‌ ಕಮಾಂಡರ್‌ ಇನ್‌ ಚೀಫ್ ಅವರ ವಿಶೇಷ ಹಣಕಾಸು ಅಧಿಕಾರದಡಿ ಜಾಗತಿಕ ಪೂರೈಕೆದಾರರಿಂದ 5,719 ಸ್ನೈಪರ್‌ ರೈಫ‌ಲ್ ಗ‌ಳನ್ನು ಖರೀದಿ ಮಾಡಲು ಭಾರತೀಯ ಸೇನೆಯು ಟೆಂಡರ್‌ ಕರೆದಿತ್ತು. ಇದೀಗ ಬೆರೆಟ್ಟಾ ಮತ್ತು ಬರೆಟ್ಟ್ ಸಂಸ್ಥೆಗಳ ಸೂಪರ್ ಸ್ನೈಪರ್ ಗಳನ್ನು ಖರೀದಿ ಮಾಡಲಾಗಿದೆ. ಇದಲ್ಲದೆ ಭವಿಷ್ಯದಲ್ಲಿ ಮತ್ತಷ್ಟು ಸ್ನೈಪರ್ ರೈಫಲ್ ಗಳ ಖರೀದಿ ಮಾಡುವುದಾಗಿ ಸೇನಾ ಮೂಲಗಳು ತಿಳಿಸಿವೆ. ಅಲ್ಲದೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲೇ ಸೂಪರ್ ಸ್ನೈಪರ್ ರೈಫಲ್ ಗಳನ್ನು ನಿರ್ಮಾಣ ಮಾಡಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿವೆ.
ಇನ್ನು ಭಾರತೀಯ ಸೇನೆ ಪ್ರಸ್ತುತ ರಷ್ಯಾದ ಡ್ರ್ಯಾಗೊನೋವ್‌ ಎಸ್ ವಿಡಿ ರೈಫ‌ಲ್ ಗ‌ಳನ್ನು ಬಳಕೆ ಮಾಡುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ