ದೇಶ

ಜಮ್ಮುವಿನಲ್ಲಿ ಸಿಲುಕಿದ್ದ 700 ಪ್ರಯಾಣಿಕರನ್ನು ಏರ್ ಲಿಫ್ಟ್ ಮಾಡಿದ ವಾಯುಪಡೆ!

Srinivas Rao BV
ಜಮ್ಮು: ಜಮ್ಮುವಿನಲ್ಲಿ ಸಿಲುಕಿಕೊಂಡಿದ್ದ 700 ಪ್ರಯಾಣಿಕರನ್ನು ಭಾರತೀಯ ವಾಯುಪಡೆ ಶ್ರೀನಗರಕ್ಕೆ ಏರ್ ಲಿಫ್ಟ್ ಮಾಡಿದೆ.
ಕಳೆದ ನಾಲ್ಕು ದಿನಗಳಿಂದ ಏರ್ ಲಿಫ್ಟ್ ಮೂಲಕ ಬೇರೆಡೆಗೆ ಸ್ಥಳಾಂತರಿಸಲಾದ ಪ್ರಯಾಣಿಕರ ಸಂಖ್ಯೆ ಒಟ್ಟು 1,432 ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ. ಇದೇ ಮೊದಲ ಬಾರಿಗೆ c-17 ಏರ್ ಕ್ರಾಫ್ಟ್ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದು 707 ಪ್ರಯಾಣಿಕರನ್ನು ಏರ್ ಲಿಫ್ಟ್ ಮಾಡಿದೆ. 
ದೇಶದ ಇತರ ಭಾಗಗಳಿಗೆ ಸಂಪರ್ಕ ಕೊಂಡಿಯಾಗಿದ್ದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮಪಾತವಾಗುತ್ತಿರುವುದರಿಂದ ರಸ್ತೆ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದ್ದು, ಸಾವಿರಾರು ಜನರು ಜಮ್ಮುವಿನಲ್ಲೇ ಪ್ರಯಾಣಿಸಲು ಸಾಧ್ಯವಾಗದೇ ಸಿಲುಕಿದ್ದರು. ಜಿಲ್ಲಾಡಳಿತ ಹಾಗೂ ಭಾರತೀಯ ವಾಯುಪಡೆ, ರಕ್ಷಣಾ ಕಾರ್ಯಾಚರಣೆಯನ್ನು ಜಂಟಿಯಾಗಿ ಕೈಗೊಂಡಿದ್ದು, ಮೊದಲ ಹಂತದಲ್ಲಿ 301, ಎರಡನೇ ಹಂತದಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ 406 ಪ್ರಯಾಣಿಕರನ್ನು ಏರ್ ಲಿಫ್ಟ್ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ. ಜಮ್ಮು ಮೂಲದ ಟೈಗರ್ ವಿಭಾಗದಿಂದ ಜನರಿಗೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ. 
SCROLL FOR NEXT