ದೇಶ

ಉದ್ದೇಶಿತ ಒಪ್ಪಂದಕ್ಕೂ ರಾಫೆಲ್ ಗೂ ಸಂಬಂಧ ಇಲ್ಲ: ರಾಹುಲ್ ಆರೋಪ ತಳ್ಳಿಹಾಕಿದ ರಿಲಯನ್ಸ್ ಡಿಫೆನ್ಸ್

Lingaraj Badiger
ನವದೆಹಲಿ: ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್, ಉದ್ದೇಶಿತ ಒಪ್ಪಂದಕ್ಕೂ ಮತ್ತು ರಾಫೆಲ್ ಡೀಲ್ ಗೂ ಯಾವುದೇ ಸಂಬಂಧ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದೆ.
ರಾಹುಲ್ ಗಾಂಧಿ ಪ್ರಸ್ತಾಪಿಸಿರುವ ಒಪ್ಪಂದ ಏರ್ ಬಸ್ ಹೆಲಿಕಾಪ್ಟರ್ ಗೆ ಸಂಬಂಧಿಸಿದ್ದು, ಅದಕ್ಕು ಯುದ್ಧ ವಿಮಾನದ ಒಪ್ಪಂದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ರಿಲಯನ್ಸ್ ಡಿಫೆನ್ಸ್ ವಕ್ತಾರರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಉಲ್ಲೇಖಿಸಿರುವ ಇ-ಮೇಲ್ ನಲ್ಲಿ, ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸಿವಿಲ್ ಮತ್ತು ಡಿಫೆನ್ಸ್ ಹೆಲಿಕಾಪ್ಟರ್ ಗೆ ಸಂಬಂಧಿಸಿದಂತೆ ಏರ್ ಬಸ್ ಹಾಗೂ ರಿಲಯನ್ಸ್ ಡಿಫೆನ್ಸ್ ಮಧ್ಯ ಚರ್ಚೆ ನಡೆದಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರ ವರ್ತನೆಯನ್ನುಗಮನಿಸಿದರೆ ಅವರು ಅನಿಲ್ ಅಂಬಾನಿ ಅವರ ಮಧ್ಯವರ್ತಿಯಂತೆ ವರ್ತಿಸುತ್ತಿದ್ದಾರೆ. ಪ್ರಸ್ತುತ ಬಿಡುಗಡೆಯಾಗಿರುವ ಇ- ಮೇಲ್ ನಲ್ಲಿ ಅನಿಲ್ ಅಂಬಾನಿ ಪ್ರೆಂಚ್ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅದೂ ಕೂಡ ಕೇಂದ್ರ ಸರ್ಕಾರ ರಾಫೆಲ್ ಒಪ್ಪಂದಕ್ಕೆ ಸಹಿ ಹಾಕುವ 10 ದಿನಗಳ ಮೊದಲೇ. ಕೇಂದ್ರ ಸರ್ಕಾರ ಇಂತಹುದೊಂದು ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಅನಿಲ್ ಅಂಬಾನಿಗೆ ಮೊದಲೇ ತಿಳಿದಿತ್ತೇ..? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಕುರಿತ ಇ-ಮೇಲ್ ದಾಖಲೆಯೊಂದನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಬೇಹುಗಾರರು ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ರಾಹಲ್ ಆರೋಪಿಸಿದ್ದರು.
SCROLL FOR NEXT