ದೇಶ

ಪುಲ್ವಾಮಾ ದಾಳಿ ನಂತರ ವಿವಾದಾಸ್ಪದ ಹೇಳಿಕೆ: ಕಪಿಲ್ ಶರ್ಮಾ ಶೋ ನಿಂದ ಸಿಧುಗೆ ಗೇಟ್ ಪಾಸ್!

Raghavendra Adiga
ಮುಂಬೈ: ಜಮ್ಮು-ಕಾಶ್ಮೀರದಲ್ಲಿನ ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನ ಜತೆ ಮಾತುಕತೆ ನಡೆಸಿ ಎಂದು ಹೇಳಿದ್ದ ಪಂಜಾಬ್ ಸಚಿವ  ನವಜೋತ್ ಸಿಧು ಅವರನ್ನು ಜನಪ್ರಿಯ ಟಿವಿ ಶೋ "ಕಪಿಲ್ ಶರ್ಮಾ ಶೋ" ನಿಂದ ಕೈ ಬಿಡಲಾಗಿದೆ.
ಪಾಕಿಸ್ತಾನ ಪರ ಮೃದು ಧೋರಣೆ ತಳೆದಿದ್ದ ಸಿಧು ಅವರನ್ನು ಕಾರ್ಯಕ್ರಮದಿಂದ ಕೈಬಿಡಬೇಕೆಂದು ಸೆನೆಟರ್ ಗಳು ನಡೆಸಿದ್ದ ಆನ್ ಅಲಿನ್ ಅಭಿಯಾನಕ್ಕೆ ಸೋನಿ ಟಿವಿ ಸ್ಪಂದಿಸಿದ್ದು ಸಿಧು ಅವರನ್ನು ಕಾರ್ಯಕ್ರಮದಿಂದ ಕೈಬಿಟ್ಟಿದೆ.
ಪುಲ್ವಾಮಾ ದಾಳಿ ಬಳಿಕ ಮಾತನಾಡಿದ್ದ ಸಿಧು "ಪುಲ್ವಾಮಾ ಉಗ್ರ ದಾಳಿ ಖಂಡನೀಯ, ಆದರೆ ಕಳೆದ ಎಪ್ಪತ್ತೇಳು ವರ್ಷಗಳಿಂದ ಈ ಘಟನೆ ಮರುಕಳಿಸುತ್ತಿದೆ. ಇದಕ್ಕೆಲ್ಲಾ ಪಾಕ್ ಜತೆ ಮಾತುಕತೆಯೊಂದೇ ಪರಿಹಾರ" ಎಂದಿದ್ದರು. ಅಲ್ಲದೆ ಒಂದು ಉಗ್ರ ದಾಳಿಯ ಹಿನ್ನೆಲೆಯಲ್ಲಿ ಇಡೀ ದೇಶವನ್ನು ದ್ವೇಷಿಸುವುದು ಒಳ್ಳೇದಲ್ಲ ಎಂದೂ ಹೇಳಿದ್ದರು.
ಸಿಧು ಅವರ ಈ ಹೇಳಿಕೆಗೆ ಸಾಮಾಜಿಕ ತಾಣದಲ್ಲಿ ನೆಟ್ಟಿಗರಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ ದೇಶದಾದ್ಯಂತ ಜನರು ಸಿಧು ಹೇಳಿಕೆ ವಿರುದ್ಧ ಸಿಡಿದೆದ್ದಿದ್ದರು.
SCROLL FOR NEXT