ದೇಶ

10 ರುಪಾಯಿ ಸೀರೆಗೆ ಮುಗಿಬಿದ್ದ ಮಹಿಳೆಯರು, ಅಂಗಡಿಯಲ್ಲೇ ಬಡಿದಾಡಿಕೊಂಡ ಹೆಂಗಸರು!

Vishwanath S
ಹೈದರಾಬಾದ್: ಸಾವಿರಾರೂ ರುಪಾಯಿ ಸೀರೆಗಳನ್ನೇ ಖರೀದಿಸುವ ಹೆಂಗಸರಿಗೆ ಇನ್ನು 10 ರುಪಾಯಿಗೆ ಒಂದು ಸೀರೆ ಎಂದು ಹೇಳಿದರೆ ಏನಾಗುತ್ತದೆ. ನನಗೂ ಇರಲಿ ನನ್ನ ಮಗಳಿಗೂ ಇರಲಿ ಅಂತ ಹತ್ತಾರು ಸೀರೆಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. 
ಹೌದು. ಹೈದರಾಬಾದ್ ನಲ್ಲಿ ಎಂಸಿಆರ್ ಮಾಲ್ ನಲ್ಲಿ ಗ್ರಾಹಕರ ಊಹೆಗೂ ಮೀರಿದ ಆಫರ್ ನೀಡಲಾಗಿತ್ತು. ಅದೇನೆಂದರೆ 10 ರೂಪಾಯಿಗೆ ಒಂದು ಸೀರೆ. ಈ ವಿಚಾರ ಕಾಡ್ಗಿಚ್ಚಿಗಿಂತಲೂ ವೇಗವಾಗಿ ಹಬ್ಬಿತ್ತು. ಪರಿಣಾಮ ಮಹಿಳೆಯರ ದಂಡೆ ಮಾಲ್ ಕಡೆ ನುಗ್ಗಿತ್ತು. ಸಾಗರೋಪಾದಿಯಲ್ಲಿ ಹೆಂಗಸರು ನೆರೆದಿದ್ದರಿಂದ ಕಾಲ್ತುಳಿದಂಥ ಪರಿಸ್ಥಿತಿ ಕೂಡ ನಿರ್ಮಾಣವಾಯಿತು.
ಒಂದೇ ಬಾರಿ ಇಷ್ಟೊಂದು ಜನರು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಅನೇಕರು ಗಾಯಗೊಂಡಿದ್ದಾರೆ. 10 ರೂ. ಸೀರೆ ಕೊಂಡುಕೊಳ್ಳಲು ಬಂದು ಆಸ್ಪತ್ರೆ ಪಾಲಾಗಿದ್ದಾರೆ. ಸದ್ಯ ಮಾಲ್ ಅನ್ನು ಸೀಜ್ ಮಾಡಲಾಗಿದೆ.
SCROLL FOR NEXT