ದೇಶ

ಬಾಲಕಿ ಅಪಹರಿಸಿ, ಅತ್ಯಾಚಾರ: ತಮಿಳುನಾಡು ಪೊಲೀಸರಿಂದ ಮೂವರ ಬಂಧನ

Lingaraj Badiger
ಚೆನ್ನೈ: 15 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರು ಯುವಕರನ್ನು ತಮಿಳುನಾಡು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಮೂವರು ಯುವಕರು ನಾಗಪಟ್ಟಣಂ ಮೂಲದ ಬಾಲಕಿಯನ್ನು ಅಪಹರಿಸಿ ವೆಲಂಕಣಿಯ ಲಾಡ್ಜ್ ನಲ್ಲಿ ಅತ್ಯಾಚಾರ ಎಸಗಿದ್ದರು. ಬಳಿಕ ಬಾಲಕಿಯನ್ನು ಲಾಡ್ಜ್ ನಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಕೊಯಂಬತ್ತೂರಿನ ತಮ್ಮ ಅಂಕಲ್ ಮನೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿದ್ದಳು. ಕೂಡಲೇ ಬಾಲಕಿ ಅಂಕಲ್ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಾದ ಎಸ್ ವಿಜಯ್(23), ಕೆ ಅರವಿಂದ್(23) ಮತ್ತು ಕೆ ಪ್ರದೀಪ್(23) ಅವರನ್ನು ಇಂದು ಬಂಧಿಸಿದ್ದಾರೆ.
ಬಂಧಿತ ಎಲ್ಲಾ ಆರೋಪಿಗಳು ಮೀನುಗಾರರಾಗಿದ್ದು, ಕೆಲವು ವಾರಗಳ ಹಿಂದಷ್ಟೇ ಬಾಲಕಿಗೆ ಪರಿಚವಾಗಿದ್ದ ವಿಜಯ್, ಫೆಬ್ರವರಿ 13ರಂದು ತನ್ನ ಇಬ್ಬರು ಸ್ನೇಹಿತರೊಂದಿಗೆ  ಸೇರಿ ಬಾಲಕಿಯನ್ನು ಅಪಹರಿಸಿದ್ದು, ಫೆಬ್ರವರಿ 14ರಂದು ಬಾಲಕಿಯನ್ನು ಲಾಡ್ಜ್ ನಲ್ಲಿಯೇ ಬಿಟ್ಟು ಹೋಗಿದ್ದರು. ಅಲ್ಲದೆ ಅತ್ಯಾಚಾರ ಘಟನೆಯನ್ನು ವಿಡಿಯೋ ಮಾಡಿ, ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT