ದೇಶ

ಉತ್ತರ ಭಾರತದಲ್ಲಿ ಲಘು ಭೂಕಂಪ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕಂಪಿಸಿದ ಭೂಮಿ

Raghavendra Adiga
ನವದೆಹಲಿ: ಬುಧವಾರ ಬೆಳಿಗ್ಗೆ ಉತ್ತರ ಭಾರತದ ಹಲವೆಡೆ ಲಘು ಭೂಕಂಪನ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದ್ದು ಉತ್ತರ ಪ್ರದೇಶ ಮುಜಾಫರ್‌ ನಗರದ ನೈಋತ್ಯ ಭಾಗದಲ್ಲಿ ಭೂಕಂಪನ ಕೇಂದ್ರವಿತ್ತು ಎಂದು  ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು  ಹೇಳಿದ್ದಾರೆ. 
ಈ ಭೂಕಂಪದ ಕಾರಣ ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಉತ್ತರ ಭಾರತದ ಹಲವೆಡೆ ಜನರು ಭಯಭೀತರಾಗಿದ್ದಾರೆ. 
ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ಭೂಕಂಪನ ಅನುಭವವಾಗಿದ್ದು ಭೂಮಿಯ ೬ ಕಿಮೀ ಆಳದಲ್ಲಿ ಕಂಪನವಾಗಿರುವ ಕುರಿತು ಹವಾಮಾನ ಇಲಾಖೆ ಜಾಲತಾಣದಲ್ಲಿ ವರದಿ ಪ್ರಕಟಿಸಿದೆ.
SCROLL FOR NEXT