ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು 
ದೇಶ

ಅಸ್ಸಾಂ: ವಿಷಕಾರಿ ಮದ್ಯ ಸೇವಿಸಿ 32 ಕಾರ್ಮಿಕರು ಸಾವು, ಹಲವರು ಅಸ್ವಸ್ಥ

ಅಸ್ಸಾಂನ ಗೋಲಾಘಾಟ್ ನಲ್ಲಿ ವಿಷಕಾರಿ ಮದ್ಯ ಸೇವಿಸಿ ಒಂಬತ್ತು ಮಹಿಳೆಯರು ಸೇರಿದಂತೆ ಟೀ ತೋಟದ 32 ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.

ಗುವಾಹಟಿ: ಅಸ್ಸಾಂನ ಗೋಲಾಘಾಟ್ ನಲ್ಲಿ ವಿಷಕಾರಿ ಮದ್ಯ ಸೇವಿಸಿ ಒಂಬತ್ತು ಮಹಿಳೆಯರು ಸೇರಿದಂತೆ ಟೀ ತೋಟದ 32 ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ವಿಷಕಾರಿ ಮದ್ಯ ಸೇವಿಸಿದ ಹಲವು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮೃತರಲ್ಲಿ ಹೆಚ್ಚಿನವರು ಗೋಲಾಘಾಟ್‌ನ ಶಾಲಮಾರ ಪ್ರಾಂತ್ಯದ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ.
ಸುಮಾರು 100 ಜನರು ಈ ವಿಷಕಾರಿ ಮದ್ಯವನ್ನು ಸೇವಿಸಿದ್ದು, ಅಸ್ವಸ್ಥರಾದ 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ ನೆರವು ಒದಗಿಸಲು ಸರ್ಕಾರಕ್ಕೆ  ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳ ಅಗತ್ಯ: ವಾಯುಸೇನಾ ಮುಖ್ಯಸ್ಥ

BSFನಿಂದ ಇಬ್ಬರು ಪಾಕಿಗಳ ಹತ್ಯೆ: ಭಾರತೀಯ ರಾಯಭಾರಿ ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದ ಪಾಕಿಸ್ತಾನ!

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!