ದೇಶ ಸುರಕ್ಷಿತ ಕೈಗಳಲ್ಲಿವೆ, ದೇಶಕ್ಕಿಂತ ಮಿಗಿಲು ಯಾವುದೂ ಇಲ್ಲ, ದೇಶ ತಲೆತಗ್ಗಿಸಲು ಬಿಡಲ್ಲ- ಪ್ರಧಾನಿಮೋದಿ 
ದೇಶ

ದೇಶ ಸುರಕ್ಷಿತ ಕೈಗಳಲ್ಲಿದೆ, ದೇಶಕ್ಕಿಂತ ಮಿಗಿಲು ಯಾವುದೂ ಇಲ್ಲ, ದೇಶ ತಲೆ ತಗ್ಗಿಸಲು ಬಿಡಲ್ಲ: ಪ್ರಧಾನಿ ಮೋದಿ

ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ದೇಶ ಎಂದಿಗೂ ತಲೆತಗ್ಗಿಸುವಂತೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚುರು: ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ದೇಶ ಎಂದಿಗೂ ತಲೆತಗ್ಗಿಸುವಂತೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು, ಫೆ.25 ರಂದು ರಾತ್ರಿ ಭಾರತೀಯ ವಾಯುಪಡೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ತರಬೇತಿ ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ನಡೆಸಿ ಕನಿಷ್ಟ 300 ಉಗ್ರರನ್ನು ಭಸ್ಮ ಮಾಡಿತ್ತು. ಈ ಬೆನ್ನಲ್ಲೇ ಫೆ.26 ರಂದು ರಾಜಸ್ಥಾನದ ಚುರುವಿನಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, 2014 ರಲ್ಲಿ ತಾವು ಚುರುವಿನಲ್ಲೇ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. 
ದೇಶಕ್ಕಿಂತ ಮಿಗಿಲು ಯಾವುದೂ ಇಲ್ಲ, ದೇಶ ತಲೆತಗ್ಗಿಸಲು ಬಿಡುವುದಿಲ್ಲ ಎಂದು 2014 ರಲ್ಲಿ ಇದೇ ಚುರುವಿನಲ್ಲಿ ನನ್ನ ಮನದಾಳದ ಮಾತನ್ನು ನಿಮ್ಮ ಮುಂದೆ ಹೇಳಿದ್ದೆ. 2014 ರ ದಿನವನ್ನು ಮತ್ತೆ ನೆನಪಿಸಿಕೊಳ್ಳುತ್ತುದ್ದೇನೆ ದೇಶ ಸುರಕ್ಷಿತವಾದ ಕೈಗಳಲ್ಲಿದೆ ಎಂಬ ಭರವಸೆ ನೀಡುತ್ತೇನೆ. ದೇಶ ತಲೆತಗ್ಗಿಸಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ. 
ಇದೇ ವೇಳೆ ಯೋಧರ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ಯೋಧರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕ ಯೋಧರಿಗೆ ಅರ್ಪಣೆ ಮಾಡಿದ್ದೇವೆ, ನಮ್ಮ ಸರ್ಕಾರ ಬಂದ ನಂತರ 20 ಲಕ್ಷಕ್ಕಿಂತ ಹೆಚ್ಚು ಯೋಧರ ಕುಟುಂಬಗಳಿಗೆ ಒಆರ್ ಒಪಿ ಲಾಭ ದೊರೆತಿದೆ ಎಂದು ಮೋದಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮದ್ದೂರಿನಲ್ಲಿ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಪೊಲೀಸರಿಂದ ಲಾಠಿಚಾರ್ಜ್, 21 ಮಂದಿ ಬಂಧನ: ಪೊಲೀಸರಿಗೆ ಸಿಎಂ ಖಡಕ್ ಸೂಚನೆ

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ನಾಲ್ವರು ಹೋಂಗಾರ್ಡ್​ ಸೇರಿ 8 ಮಂದಿ ಗಾಯ,ಸೆಕ್ಷನ್ 144 ಜಾರಿ

'ಭಾರತದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್‌ಗೆ ತನ್ನ ತಪ್ಪಿನ ಅರಿವಾಗಿದೆ': ಭಾರತದ ಮಾಜಿ ರಾಜತಾಂತ್ರಿಕ ಕೆಪಿ ಫ್ಯಾಬಿಯನ್

'ಅವಮಾನಗಳನ್ನು ಮರೆಯಲು ಸಾಧ್ಯವಿಲ್ಲ': ಭಾರತ-ಅಮೆರಿಕ ಸಂಬಂಧ ಕುರಿತು ಟ್ರಂಪ್ ಹೇಳಿಕೆಗೆ ಶಶಿ ತರೂರ್ ತಿರುಗೇಟು

ವಿಧಾನ ಪರಿಷತ್‌ ನಾಮನಿರ್ದೇಶನಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್: ಆರತಿ ಕೃಷ್ಣ, ಪತ್ರಕರ್ತ ಶಿವಕುಮಾರ್ ಸೇರಿ ನಾಲ್ವರ ನೇಮಕ

SCROLL FOR NEXT