ದೇಶ

ಮೋದಿ ಪೌರ ಕಾರ್ಮಿಕರ ಕಾಲುತೊಳೆಯುವುದರಿಂದ ಅವರ ಹೊಟ್ಟೆ ತುಂಬಲ್ಲ: ಶಿವಸೇನೆ

Lingaraj Badiger
ಮುಂಬೈ: ಕುಂಭಮೇಳದಲ್ಲಿ ಐವರು ಪೌರ ಕಾರ್ಮಿಕರ ಪಾದಪೂಜೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯದ ಬಗ್ಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ಕಾಲು ತೊಳೆಯುವುದರಿಂದ ಪೌರ ಕಾರ್ಮಿಕರ ಹೊಟ್ಟೆ ತುಂಬುವುದಿಲ್ಲ ಎಂದು ಕಿಡಿಕಾರಿದೆ.
ಎರಡು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ಸ್ವಚ್ಥತೆಗೆ ಕಾರಣರಾದ ಪೌರ ಕಾರ್ಮಿಕರ ಪಾದಪೂಜೆ ಮಾಡಿದ್ದರು. 
ಪೌರ ಕಾರ್ಮಿಕರ ಕಾಲು ತೊಳೆದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇವೆ. ಆದರೆ ಅವರಿಗೆ ಕಾಲುಗಳ ಬಗ್ಗೆ ಚಿಂತೆ ಇಲ್ಲ. ಅವರ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ ಇದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಟೀಕಿಸಿದೆ.
ಪೌರ ಕಾರ್ಮಿಕರು ತಮ್ಮ ಕಾಲ ಮೇಲೆ ತಾವು ನಿಂತುಕೊಂಡಾಗ ಮಾತ್ರ ಪ್ರಧಾನಿ ಮೋದಿಯ ಪಾದಪೂಜೆಯ ಫಲ ನೀಡಿದಂತಾಗುತ್ತದೆ ಎಂದು ಶಿವಸೇನೆ ಹೇಳಿದೆ.
ಇದೇ ವೇಳೆ ರೈತರಿಗೆ ನಗದು ನೀಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಟೀಕಿಸಿದ ಶಿವಸೇನೆ, ಇದೊಂದು ಚುನಾವಣಾ ಗಿಮಿಕ್ ಅಷ್ಟೆ. ಅಧಿಕಾರದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಬಜೆಟ್ ಇದನ್ನೇ ಮಾಡುತ್ತವೆ ಎಂದು ಹೇಳಿದೆ.
SCROLL FOR NEXT