ದೇಶ

1999 ವಿಮಾನ ಹೈಜಾಕ್ ಮಾಡಿದ್ದ ಉಗ್ರ ಯುಸೂಫ್ ಅಜರ್ ನ್ನು ವೈಮಾನಿಕ ದಾಳಿಯಲ್ಲೇ ಉಡಾಯಿಸಿದ ಭಾರತ!

Srinivas Rao BV
ನವದೆಹಲಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ಪಾಪಿ ಉಗ್ರರ ರುಂಡ ಚೆಂಡಾಡಿದ್ದು, ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಬಾಲಕೋಟ್ ನಲ್ಲಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟಯ ಅತಿ ದೊಡ್ಡ ತರಬೇತಿ ಕ್ಯಾಂಪ್ ನ್ನು ಬಾಂಬ್ ಹಾಕಿ ಉಡಾಯಿಸಿದೆ. 
ಈ ಬಾಲಕೋಟ್ ನಲ್ಲಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಅತಿ ದೊಡ್ಡ ತರಬೇತಿ ಕ್ಯಾಂಪ್ ಗೆ ಜೈಶ್-ಇ-ಮೊಹಮ್ಮದ್ ನ ಮುಖ್ಯಸ್ಥ ಮಸೂದ್ ಅಜರ್ ನ ಭಾವಮೈದ ಮೌಲಾನ ಯೂಸೂಫ್ ಅಜರ್ ನೇತೃತ್ವ ವಹಿಸಿಕೊಂಡಿದ್ದ. 
1994 ರಲ್ಲಿ ಮಸೂದ್ ಅಜರ್ ನನ್ನು ಭಾರತ ಬಂಧಿಸಿದ್ದ ನಂತರ ಆತನನ್ನು ಬಿಡುಗಡೆ ಮಾಡಲು ಆಗ್ರಹಿಸಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ 1999 ರಲ್ಲಿIC 814 ವಿಮಾನವನ್ನು ಹೈಜಾಕ್ ಮಾಡಿತ್ತು. ಈ ವಿಮಾನ ಹೈಜಾಕ್ ಯೋಜನೆಯ ಮಾಸ್ಟರ್ ಮೈಂಡ್ ಆಗಿದ್ದವನು ಮೌಲಾನ ಯೂಸೂಫ್ ಅಜರ್. 
ಅಂದು ವಿಮಾನ ಹೈಜಾಕ್ ಮಾಡಿ ಮಸೂದ್ ಅಜರ್ ನ್ನು ಬಿಡುಗಡೆ ಮಾಡಿಸಿದ್ದ ಮೌಲಾನ ಯೂಸೂಫ್ ಅಜರ್ ನ್ನು ಭಾರತ ಫೆ.25 ರಂದು ಮಧ್ಯರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಂಬ್ ಹಾಕಿ ಉಡಾಯಿಸಿದೆ. ಯೂಸೂಫ್ ಅಜರ್ ಜೊತೆಗೆ ಇನ್ನೂ ಅನೇಕ ಉಗ್ರರು ಸುಟ್ಟು ಭಸ್ಮವಾಗಿದ್ದಾರೆ. 
SCROLL FOR NEXT