ದೇಶ

ಭಾರತ-ಪಾಕ್ ನಡುವೆ ಪ್ರಕ್ಷುಬ್ಧ ವಾತಾವರಣ: ಮೋದಿ ಸರ್ಕಾರದ ಆ ಒಂದು ನಡೆಗೆ ಪ್ರತಿಪಕ್ಷಗಳ ಬೇಸರ!

Srinivas Rao BV
ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲೆ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಡೆಯಿಂದಕ್ಕೆ ಅಸಮಾಧಾನ ವ್ಯಕ್ತಪಡಿಸಿವೆ. 
ಭಾರತ ಪಾಕ್ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆದ ನಂತರ ಪಾಕಿಸ್ತಾನ ಭಾರತದ ವಾಯುಗಡಿ ಉಲ್ಲಂಘನೆ ಮಾಡಿದೆ. ಈ ಘಟನೆಯ ಬಳಿಕ ಭಾರತ-ಪಾಕ್ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲೂ ಮೋದಿ ಸರ್ವಪಕ್ಷ ಸಭೆ ಕರೆದಿಲ್ಲ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. 
"ಪಾಕ್ ಉಗ್ರರ ಮೇಲೆ ವೈಮಾನಿಕ ದಾಳಿ, ವಾಯುಸೇನೆಯ ಕಾರ್ಯಾಚರಣೆ ಬಗ್ಗೆ ನಮಗೆ ಹೆಮ್ಮೆ ಇದೆ, ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆಯೇ ಮುಖ್ಯ.  ಇಂತಹ ಸಂದರ್ಭಗಳಲ್ಲಿ ಪ್ರಧಾನಿಗಳು ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ಆದರೆ ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಸಂಪ್ರದಾಯ ಮುರಿದಿದ್ದಾರೆ. ಪಾಕಿಸ್ತಾನದ ದುಸ್ಸಾಹಸವನ್ನು ನಾವು ಖಂಡಿಸುತ್ತೇವೆ. ನಾಪತ್ತೆಯಾಗಿರುವ ಭಾರತೀಯ ಯೋಧನ ಸುರಕ್ಷಿತ ಬಿಡುಗಡೆ ಬಗ್ಗೆ ನಮಗೆ ಆತಂಕವಿದೆ. ಪ್ರಧಾನಿ ಮೋದಿ ಸರ್ಕಾರ ಯೋಧರ ತ್ಯಾಗವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ, ಮೋದಿ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
SCROLL FOR NEXT