ಸಂಗ್ರಹ ಚಿತ್ರ 
ದೇಶ

ಜನರು ನಮ್ಮನ್ನು ನೋಡಿ ನಗುತ್ತಿದ್ದಾರೆ, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ: ರಾಜ್ಯಸಭೆ ಗದ್ದಲ ಕುರಿತು ಸಭಾಪತಿ

ಸಂಸತ್ತಿನಲ್ಲಿ ನಾಯಕರ ಗದ್ದಲವನ್ನು ನೋಡಿ ಜನರು ನಗುತ್ತಿದ್ದಾರೆ, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಮುಂದುವರೆದ ಗದ್ದಲ ಕುರಿತು ಸಭಾಪತಿ ವೆಂಕಯ್ಯ ನಾಯ್ಡು ಅವರು ಬುಧವಾರ ತೀವ್ರ...

ನವದೆಹಲಿ: ಸಂಸತ್ತಿನಲ್ಲಿ ನಾಯಕರ ಗದ್ದಲವನ್ನು ನೋಡಿ ಜನರು ನಗುತ್ತಿದ್ದಾರೆ, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಮುಂದುವರೆದ ಗದ್ದಲ ಕುರಿತು ಸಭಾಪತಿ ವೆಂಕಯ್ಯ ನಾಯ್ಡು ಅವರು ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ತ್ರಿವಳಿ ತಲಾಖ್ ಹಾಗೂ ವಂದೇ ಮಾತರಂ ವಿವಾದ ಸಂಬಂಧ ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಭಾಪತಿಗಳು ಪದೇ ಪದೇ ಅಧಿವೇಶನವನ್ನು ಮುಂದೂಡುತ್ತಿದ್ದಾರೆ. 
ಪದೇ ಪದೇ ಗದ್ದಲ ಎದುರಾಗುತ್ತಿರುವ ಹಿನ್ನಲೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿರುವ ವೆಂಕಯ್ಯ ನಾಯ್ಡು ಅವರು, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ. ನಮ್ಮನ್ನು ನೋಡಿ ಜನರು ನಗುತ್ತಿದ್ದಾರೆಂದು ಹೇಳುವ ಮೂಲಕ ಪ್ರತಿಭಟನೆಗಿಳಿದಿದ್ದ ಹಲವು ಸಂಸದರನ್ನು ಮೌನವಾಗಿರುವಂತೆ ಮಾಡಿದರು. 
ರಾಜ್ಯಸಭೆ ಕಲಾಪ ಸುಗಮವಾಗಿ ಸಾಗಲು ದಯವಿಟ್ಟು ಸಹಕರಿಸಿ. ಅಧಿವೇಶನ ಅರ್ಥಪೂರ್ಣವಾಗಿ ಸಾಗಬೇಕು. ಹಲವು ವಿಚಾರಗಳ ಬಗ್ಗೆ ಚರ್ಚೆಗಳು ಬಾಕಿಯಿದೆ. ಸಮಸ್ಯೆಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!