ಉದ್ಧವ್ ಠಾಕ್ರೆ 
ದೇಶ

ಮೋದಿ ಸರ್ಕಾರವಲ್ಲದೇ ಬೇರೆ ಯಾರು ರಾಮ ಮಂದಿರ ನಿರ್ಮಿಸುತ್ತಾರೆ: ಉದ್ಧವ್ ಠಾಕ್ರೆ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಗೆ ರಾಮನಿಗಿಂತ ಕಾನೂನೇ ದೊಡ್ಡದು, ಆದರೆ ಅಧಿಕಾರಕ್ಕೆ ಬರಲು ರಾಮನನ್ನು ಬಳಸಿಕೊಂಡರು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂಬೈ: ಪ್ರಧಾನಿ ನರೇಂದ್ರ ಮೋದಿಗೆ ರಾಮನಿಗಿಂತ ಕಾನೂನೇ ದೊಡ್ಡದು, ಆದರೆ ಅಧಿಕಾರಕ್ಕೆ ಬರಲು ರಾಮನನ್ನು ಬಳಸಿಕೊಂಡರು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಮಾತನಾಡಿರುವ ಉದ್ಧವ್ ಠಾಕ್ರೆ, 2019 ಕ್ಕಿಂತ ಮುಂಚಿತವಾಗಿ ಪ್ರಧಾನಿ ಮೋದಿ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡದೇ ಇದ್ದರೆ ಬೇರೆ ಯಾರು ನಿರ್ಮಿಸುತ್ತಾರೆ? ಒಂದು ವೇಳೆ 2019 ರ ಚುನಾವಣೆಗಿಂತ ಮೊದಲು ರಾಮ ಮಂದಿರ ನಿರ್ಮಾಣವಾಗದೇ ಇದ್ದರೆ ಅದು ದೇಶದ ಜನತೆಯನ್ನು ವಂಚಿಸಿದಂತೆ ಇದಕ್ಕಾಗಿ ತಮ್ಮ ಬಳಿ ಬಿಜೆಪಿ ಆರ್ ಎಸ್ ಎಸ್ ತಮ್ಮಲ್ಲಿ ಕ್ಷಮೆ ಕೋರಬೇಕಾಗುತ್ತದೆ ಎಂದು ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ. 
ಪ್ರಧಾನಿ ವಿರುದ್ಧ ಸಂದರ್ಶನದಲ್ಲಿ ಕಿಡಿ ಕಾರಿರುವ ಉದ್ಧವ್ ಠಾಕ್ರೆ, ಬಿಜೆಪಿಗೆ ಈಗ ಸ್ಪಷ್ಟ ಬಹುಮತ ಇದೆ. ಈಗ ರಾಮ ಮಂದಿರ ನಿರ್ಮಾಣ ಮಾಡದೇ ಇದ್ದಲ್ಲಿ ಬೇರೆ ಯಾವಗ ನಿರ್ಮಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.  ಗುಜರಾತ್ ನಲ್ಲಿ ಮೋದಿ ಸರ್ಕಾರ ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣ ಮಾಡಿದೆ. ಆದರೆ ರಾಮ ಮಂದಿರದ ವಿಷಯದಲ್ಲಿ ಸರ್ದಾರ್ ಪಟೇಲರಂತೆ ಧೈರ್ಯವನ್ನು ತೋರಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಒಂದು ವೇಳೆ ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದಾದರೆ 1992 ರಲ್ಲಿ ಕರಸೇವಕರ ಬಲಿದಾನ ಏಕೆ ಆಯಿತು ಎಂದು ಉದ್ಧವ್ ಠಾಕ್ರೆ ಸಾಮ್ನಾದಲ್ಲಿ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ