ನವದೆಹಲಿ: ಶ್ರೀರಾಮ ಹಿಂದೂಗಳಿಗೆ ಮಾತ್ರ ಸೇರಿದವನಲ್ಲ, ಆತ ಇಡೀ ಜಗತ್ತಿಗೇ ಸೇರಿದವನು. ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಬೇಕಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಆಯೋಧ್ಯೆಯಲ್ಲಿನ ಭೂ ಒಡೆತನ ಯಾರಿಗೆ ಸೇರಿದ್ದು ಎಂಬ ಪ್ರಕರಣದ ವಿಚಾರಣೆ ದಿನಾಂಕವನ್ನು ಇದೇ ಜನವರಿ 10ರಂದು ಪ್ರಕಟಿಸಿ ಆದೇಶ ಹೊರಡಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದ ಬೆನ್ನಲ್ಲೇ ಫಾರೂಕ್ ಈ ಹೇಳಿಕೆ ನೀಡಿದ್ದಾರೆಯ
ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಬಾರದು. ಈ ವಿಚಾರವನ್ನು ಜನರು ಮೇಜಿನ ಚರ್ಚೆ ಮಾಡುವ ಮೂಲಕ ಬಗೆಹರಿಸಬೇಕಾಗಿದೆ.ಯಾಕೆ ಈ ವಿಚಾರವನ್ನು ಕೋರ್ಟ್‌ಗೆ ಎಳೆದೊಯ್ಯುವುದು? ಈ ವಿಚಾರ ಮಾತುಕತೆಯ ಮೂಲಕ ಬಗೆ ಹರಿಯುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದರು. ಯಾವ ದಿನ ಈ ವಿಚಾರ ಬಗೆಹರಿಯುತ್ತದೋ ಆ ದಿನ ನಾನು ಮಂದಿರಕ್ಕಾಗಿ ಇಟ್ಟಿಗೆ ಹಾಕಲು ತೆರಳುತ್ತೇನೆ ಎಂದರು.