ನಿರ್ಮಲಾ ಸೀತಾರಾಮನ್ 
ದೇಶ

ರಾಫೆಲ್ ವಿವಾದ: ರಕ್ಷಣೆಯಲ್ಲಿ ಡೀಲ್ ಮಾಡುತ್ತೇವೆ, ರಕ್ಷಣಾ ಡೀಲ್ ಮಾಡಲ್ಲ - ಸೀತಾರಾಮನ್

ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್....

ನವದೆಹಲಿ: ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕಾಂಗ್ರೆಸ್ ಸತ್ಯಕ್ಕೆ ಹೆದರುತ್ತದೆ ಎಂದು ಶುಕ್ರವಾರ ಹೇಳಿದ್ದಾರೆ.
ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ ರಕ್ಷಣಾ ಸಚಿವೆ, ರಾಷ್ಟ್ರೀಯ ಭದ್ರತೆ ಅತ್ಯಂತ ಮಹತ್ವದ್ದು. ಅಂಕಿ, ಅಂಶಗಳಿಂದ ನಾವು ಓಡಿ ಹೋಗುತ್ತಿಲ್ಲ ಎಂದರು.
ಸೆಪ್ಟೆಂಬರ್ 2019ರಲ್ಲಿ ಮೊದಲ ರಾಫೆಲ್ ಯುದ್ಧ ವಿಮಾನದ ಡೆಲಿವೆರಿ ಆಗಲಿದೆ. ನಂತರ 2022ರ ವೇಳೆಗೆ ಎಲ್ಲಾ 36 ವಿಮಾನಗಳು ಡೆಲಿವೆರಿ ಆಗಲಿದೆ. 14 ತಿಂಗಳಲ್ಲಿ ರಾಫೆಲ್ ಒಪ್ಪಂದದ ಮಾತುಕತೆ ಮುಗಿದಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ತಿಳಿಸಿದ್ದಾರೆ.
ನಾವು ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಯುದ್ಧಗಳನ್ನು ಹೊಂದಿದ್ದೇವೆ. ಹೀಗಾಗಿ ಸಕಾಲಕ್ಕೆ ರಕ್ಷಣಾ ಸಾಮಾಗ್ರಿ ಖರೀದಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.
ಚೀನಾ ಮತ್ತು ಪಾಕಿಸ್ತಾನ ದೊಡ್ಡ ದೊಡ್ಡ ಫ್ಲೀಟ್ ನಿರ್ಮಿಸುತ್ತಿವೆ. ಯುಪಿಎ ಸರ್ಕಾರ ಕೇವಲ 18 ಯುದ್ಧ ವಿಮಾನ ಖರೀದಿಸಲು ಬಯಸಿತ್ತು ಮತ್ತು ಅದು ಸಹ ನೆನೆಗುದಿಗೆ ಬಿದ್ದಿತು ಎಂದು ರಕ್ಷಣಾ ಸಚಿವೆ ದೂರಿದ್ದಾರೆ.
ರಕ್ಷಣಾ ಒಪ್ಪಂದಕ್ಕೂ ಮತ್ತು ರಕ್ಷಣೆಯಲ್ಲಿ ಒಪ್ಪಂದಕ್ಕೂ ಬಹಳ ವ್ಯತ್ಯಾಸವಿದೆ. ನಾವು ರಕ್ಷಣಾ ಡೀಲ್ ಮಾಡುತ್ತಿಲ್ಲ. ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡುವುದಕ್ಕಾಗಿ ರಕ್ಷಣೆಯಲ್ಲಿ ಡೀಲ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ