ದೇಶ

ಅನವಶ್ಯಕ ಪ್ರಚೋದನಕಾರಿ ನಡೆ: ಶಬರಿಮಲೆ ಬಗ್ಗೆ ಹೇಳಿಕೆ ನೀಡಿ ನೆಟಿಜನ್ ಗಳ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್

Srinivas Rao BV
ನವದೆಹಲಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿ ಅಲ್ಲಿನ ಪುರಾತನ ಸಂಪ್ರದಾಯವನ್ನು ಮುರಿದಿದ್ದನ್ನು ಆರ್ ಎಸ್ ಎಸ್ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟಿಸಿವೆ. ಬಿಜೆಪಿ ನಾಯಕರೂ ಸಹ ಪ್ರತಿಭಟಿಸಿದ್ದು, ಈ ಸಾಲಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಸಹ ಸೇರಿದರಾ? ಎಂಬ ಪ್ರಶ್ನೆ ಉದ್ಭವಿಸಿದೆ. 
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಮಾತನಾಡಿರುವ ಶಶಿ ತರೂರ್, "ಇದೊಂದು ಅನವಶ್ಯಕ ಪ್ರಚೊದನಕಾರಿ ನಡೆ" ಎಂದು ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಶಶಿ ತರೂರ್, ಶಬರಿಮಲೆ ದೆವಾಲಯಕ್ಕೆ ಹೋಗಬೇಕೆಂದರೆ ಇರುಮುಡಿ ಹೊತ್ತು 18 ಮೆಟ್ಟಿಲನ್ನು ಹತ್ತಿ ಹೋಗಬೇಕು ಆದರೆ ಈಗ ಅಲ್ಲಿಗೆ ಪ್ರವೇಶಿಸಿರುವ ಮಹಿಳೆಯರು ಈ ರೀತಿ ಹೋಗಿಲ್ಲ, ಇದರಿಂದಾಗಿ ಅವರಿಗೆ ಸಮಾಧಾನ ತಂದಿರುತ್ತದೆ ಎಂದು ನಾನು ಊಹಿಸಲಾರೆ, ಆದ್ದರಿಂದ ತಾಂತ್ರಿಕವಾಗಿ ಮಹಿಳೆಯರು ಅಲ್ಲಿ ಪೂಜೆಯನ್ನೇ ಸಲ್ಲಿಸಿಲ್ಲ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. 
ಮಹಿಳೆಯರ ಪ್ರವೇಶವೊಂದು ಅನವಶ್ಯಕ ಪ್ರಚೋದನಕಾರಿ ನಡೆಯಷ್ಟೇ ಆದರೂ ನಾನು ಲಿಂಗಸಮಾನತೆ ಪರವಾಗಿದ್ದೇನೆ ಎಂದು ಶಶಿ ತರೂರ್ ಹೇಳಿದ್ದಾರೆ. ಆದರೆ ತರೂರ್ ಹೇಳಿಕೆಗೆ ಮಹಿಳಾವಾದಿಗಳಾದ ಕವಿತಾ ಕೃಷ್ಣನ್ ಅವರು ತಿರುಗೇಟು ನೀಡಿದ್ದು ಪ್ರಚೋದನಕಾರಿಯಲ್ಲದ ಮಹಿಳೆಯರು ಇತಿಹಾಸ ನಿರ್ಮಿಸಿದ್ದು ಕಡಿಮೆ ಎಂದು ಹೇಳಿದ್ದಾರೆ. 
2016 ರಲ್ಲಿ ಶಶಿ ತರೂರ್ ಶಬರಿಮಲೆಗೆ ಮಹಿಳೆಯರ ಪ್ರವೇಶದ ಪರವಾಗಿ ಮಾತನಾಡಿದ್ದರು. 
SCROLL FOR NEXT