ದೇಶ

ಕೇರಳ ಹಿಂಸಾಚಾರ: ಸಾಂವಿಧಾನಿಕ ಪರಿಣಾಮ ಎದುರಿಸಲು ಸಿದ್ಧರಾಗಿ, ಪಿಣರಾಯ್ ಎಚ್ಚರಿಸಿದ ಬಿಜೆಪಿ

Nagaraja AB

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ  ಮಹಿಳೆಯರ ಪ್ರವೇಶದಿಂದಾಗಿ ಕೇರಳ ರಾಜ್ಯದಾದ್ಯಂತ   ಉಂಟಾಗಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗುವಂತೆ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಗೆ ಬಿಜೆಪಿ ಎಚ್ಚರಿಕೆ ನೀಡಿದೆ.

ಹಿಂಸಾಚಾರ ತಡೆಗಟ್ಟುವಂತೆ ಮುಖ್ಯಮಂತ್ರಿಗೆ ಸಲಹೆ , ಸೂಚನೆ ನೀಡಲಾಗಿದೆ. ಒಂದು ವೇಳೆ ಹಿಂಸಾಚಾರ ತಡೆಗಟ್ಟುವಲ್ಲಿ ವಿಫಲವಾದರೆ ಸಿಪಿಐ-ಎಂ ಸರ್ಕಾರ ಸಾಂವಿಧಾನಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಹೇಳಿದ್ದಾರೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸುಪ್ರಿಂಕೋರ್ಟ್ ಅನುಷ್ಠಾನ ನೆಪದಲ್ಲಿ ಕೇರಳ ಸರ್ಕಾರ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರನ್ನು ಟಾರ್ಗೆಟ್ ಮಾಡಿರುವ ಕೇರಳ ಸರ್ಕಾರ ,ಬಿಜೆಪಿ ಬೆಂಬಲಿಗರ ವಿರುದ್ಧ ಹಿಂಸಾತ್ಮಾಕ ಕೃತ್ಯಗಳನ್ನು ನಡೆಸಲು   ಸಿಪಿಐ-ಎಂ ಕಾರ್ಯಕರ್ತರಿಗೆ  ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಶಬರಿಮಲೆ ವಿವಾದ ಹಿಂದುಗಳಿಗೆ ಸಂಬಂಧಿಸಿದೆ, ಆಡಳಿತಾ ಪಕ್ಷಕ್ಕೆ ಸಂಬಂಧಿಸಿಲ್ಲ ಎಂದು ಕೇಸರಿ ಪಕ್ಷ ಹೇಳಿದ್ದು, ಸಿಪಿಐ ಪಕ್ಷದ ಗೂಂಡಾಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಆರ್ ಎಸ್ ಎಸ್  ಬಿಜೆಪಿ ಕಾರ್ಯಕರ್ತರ ವಿರುದ್ಧದ ಹಿಂಸಾಚಾರ ಮರುಕಳಿಸುತ್ತಿದೆ. ಇದನ್ನು ಹಿಂದೂ ಸಮಾಜದ ವಿಷಯವಾಗಿ ಪರಿಗಣಿಸಬೇಕು ಎಂದು ನರಸಿಂಹರಾವ್ ಹೇಳಿದ್ದಾರೆ.

SCROLL FOR NEXT