ಪ್ರತಿಪಕ್ಷಗಳ ನಾಯಕರು 
ದೇಶ

ಪೌರತ್ವ ಮಸೂದೆ ಕುರಿತ ಜೆಪಿಸಿ ವರದಿಗೆ ಕಾಂಗ್ರೆಸ್, ಟಿಎಂಸಿ, ಸಿಪಿಐಎಂ, ಎಸ್ ಪಿ ವಿರೋಧ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸಲ್ಲಿಸಿರುವ ಅಂತಿಮ ವರದಿಗೆ ....

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸಲ್ಲಿಸಿರುವ ಅಂತಿಮ ವರದಿಗೆ ಕಾಂಗ್ರೆಸ್ ಸೇರಿದಂತೆ ನಾಲ್ಕು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವರದಿಗೆ ಸಮ್ಮತಿ ಸೂಚಿಸಲು ನಿರಾಕರಿಸಿವೆ ಎಂದು ಮೂಲಗಳು ತಿಳಿಸಿವೆ.
ನಾಳೆ ಲೋಕಸಭೆಯಲ್ಲಿ ಮಂಡನೆಯಾಗಲಿರುವ ಜೆಪಿಸಿ ವರದಿಗೆ ಕಾಂಗ್ರೆಸ್, ಟಿಎಂಸಿ, ಸಿಪಿಐಎಂ ಹಾಗೂ ಸಮಾಜವಾದಿ ಪಕ್ಷದ ಸಂಸದರು ಸಮ್ಮತಿ ಸೂಚಿಸಿಲ್ಲ.
ಅಂತಿಮ ವರದಿ ಬಗ್ಗೆ ಜೆಪಿಸಿ ಸದಸ್ಯರಲ್ಲೇ ಒಮ್ಮತವಿಲ್ಲ ಎಂದು ಪೌರತ್ವ ತಿದ್ದುಪಡಿ ಮಸೂದೆ 2016ರ ಜಂಟಿ ಸಂಸದೀಯ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಜೆಪಿಸಿ ಸದಸ್ಯರು ಗುಜರಾತ್, ರಾಜಸ್ಥಾನ ಮತ್ತು ಅಸ್ಸಾಂಗೆ ಭೇಟಿ ನೀಡಿದ್ದು, ಅಲ್ಲಿನ ಜನ ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಜಂಟಿ ಸಂಸದೀಯ ಸಮಿತಿಯ ಎಡರಂಗ ಮತ್ತು ಟಿಎಂಸಿ ಸದಸ್ಯರು ಹೇಳಿದ್ದಾರೆ.
ಅಸ್ಸಾಂನಲ್ಲಿ ಇದು ಹೆಚ್ಚು ನಿರ್ಣಾಯಕ ವಿಷಯವಾಗಿದ್ದು, ಅಸ್ಸಾಂ ಭೇಟಿಯ ವೇಳೆ  ಸಮಿತಿಯು ಪ್ರತಿಭಟನೆಯನ್ನು ಎದುರಿಸಿತು. ಸಮಿತಿಯ ಪರವಾಗಿ, ನಾವು ರಾಜ್ಯವನ್ನು ಮತ್ತೆ ಭೇಟಿ ಮಾಡುವ ಭರವಸೆ ನೀಡಿದ್ದೇವೆ. ಹೀಗಾಗಿ ನಾವು ಅಸ್ಸಾಂಗೆ ಮತ್ತೆ ಭೇಟಿ ನೀಡದೆ ವರದಿ ಸಲ್ಲಿಸಿದರೆ ಮುಜುಗರಕ್ಕೊಳಗಾಗಬೇಕಾಗುತ್ತದೆ ಎಂದು ಎಡಪಕ್ಷದ ಸದಸ್ಯರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT