ಅನುರಾಗ್ ಠಾಕೂರ್ 
ದೇಶ

ಜಗತ್ತಿಗೆ ಆಕೆ ಇನ್ನೂ ಇಟಾಲಿಯ ಮಹಿಳೆ: ಅಗಸ್ಟಾ ಹಗರಣದ ಬಗ್ಗೆ ಅನುರಾಗ್ ಠಾಕೂರ್

ಅಗಸ್ಟಾ ಹಗರಣದ ಮಧ್ಯವರ್ಥಿ ಕ್ರಿಶ್ಚಿಯನ್ ಮೈಕೆಲ್ ಇಡಿ ವಿಚಾರಣೆ ವೇಳೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಉಲ್ಲೇಖಿಸಿದ್ದು.....

ನವದೆಹಲಿ: ಅಗಸ್ಟಾ ಹಗರಣದ ಮಧ್ಯವರ್ಥಿ ಕ್ರಿಶ್ಚಿಯನ್ ಮೈಕೆಲ್ ಇಡಿ ವಿಚಾರಣೆ ವೇಳೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಉಲ್ಲೇಖಿಸಿದ್ದು ಬಿಜೆಪಿಯ ಸಂಸದ ಅನುರಾಗ್ ಠಾಕೂರ್ ಜಗತ್ತಿಗೆ ಆಕೆ ಇನ್ನೂ ಇಟಾಲಿಯ ಮಹಿಳೆಯಾಗಿದ್ದಾರೆ ಎಂದು ಹೇಳಿದ್ದಾರೆ. 
ಭಾರತದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರೂ ಆಕೆ ಜಗತ್ತಿಗೆ ಇನ್ನೂ ಇಟಾಲಿಯ ಮಹಿಳೆಯಾಗಿದ್ದಾರೆ. ಕ್ರಿಶ್ಚಿಯನ್ ಮೈಕೆಲ್ ಹೇಳುತ್ತಾರೋ ಇಲ್ಲವೊ ಅದು ವಿಷಯವಲ್ಲ. ಆದರೆ ಅವರಿಗೆ ಇಟಾಲಿ ಮಹಿಳೆಯಾರು, ಆ ಇಟಾಲಿ ಮಹಿಳೆಯ ಪುತ್ರ ಯಾರು? ಶ್ರೀಮಂತಿ ಗಾಂಧಿ ಯಾರು? ಎಂಬುದು ತಿಳಿದಿದೆ. ಭಾರತ ಹಲವು ಬಾರಿ ಆಕೆಯನ್ನು ಸಂಸದೆಯನ್ನಾಗಿ ಆಯ್ಕೆ ಮಾಡಿದ್ದರೂ ಆಕೆ ಮಾತ್ರ ಜಗತ್ತಿನ ಕಣ್ಣಿಗೆ ಇಟಾಲಿಯ ಮಹಿಳೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಶ್ರೀಮಂತಿ ಗಾಂಧಿ ಕುರಿತಾದ ಪ್ರಶ್ನೆಗಳನ್ನು ಹೇಗೆ ನಿರ್ವಹಿಸಬೇಕೆಂಬ ಬಗ್ಗೆ ಚೀಟಿ ಬರೆದು ಅಡ್ವೊಕೇಟ್ ಗಳ ಬಳಿ ಕೇಳುತ್ತಾ ವಕೀಲರ ಭೇಟಿ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ದೆಹಲಿ ಕೋರ್ಟ್ ಕ್ರಿಶ್ಚಿಯನ್ ಮೈಕೆಲ್ ತನ್ನ ವಕೀಲರನ್ನು ಭೇಟಿ ಮಾಡುವುದಕ್ಕೆ ನಿರ್ಬಂಧ ವಿಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT