ಸಾಂದರ್ಭಿಕ ಚಿತ್ರ 
ದೇಶ

ದಿಢೀರ್ ಹರತಾಳ ನಡೆಸುವಂತಿಲ್ಲ, 7 ದಿನ ಮುಂಚೆ ನೋಟಿಸ್ ನೀಡಬೇಕು: ಕೇರಳ ಹೈಕೋರ್ಟ್

ಪದೇಪದೆ ಹರತಾಳ, ಪ್ರತಿಭಟನೆಯಿಂದ ತತ್ತರಿಸಿ ಹೋಗಿರುವ ದೇವರ ನಾಡು ಕೇರಳ ಜನತೆಗೆ ಹೈಕೋರ್ಟ್ ಸ್ವಲ್ಪ...

ತಿರುವನಂತಪುರಂ: ಪದೇಪದೆ ಹರತಾಳ, ಪ್ರತಿಭಟನೆಯಿಂದ ತತ್ತರಿಸಿ ಹೋಗಿರುವ ದೇವರ ನಾಡು ಕೇರಳ ಜನತೆಗೆ ಹೈಕೋರ್ಟ್ ಸ್ವಲ್ಪ ರಿಲೀಫ್ ನೀಡಿದ್ದು, ರಾಜ್ಯದಲ್ಲಿ ದಿಢೀರ್ ಹರತಾಳ ನಡೆಸುವುದನ್ನು ನಿಷೇಧಿಸಿ ಸೋಮವಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ದಿಢೀರ್ ಹರತಾಳ ನಿಷೇಧಿಸಬೇಕು ಎಂದು ಕೋರಿ ಕೇರಳ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಯಾವುದೇ ಸಂಘಟನೆಗಳು ಮತ್ತು ಪಕ್ಷಗಳು ದಿಢೀರ್ ಹರತಾಳಕ್ಕೆ ಕರೆ ನೀಡುವಂತಿಲ್ಲ. ಒಂದು ವೇಳೆ ಹರತಾಳ ನಡೆಸುವುದಾದರೆ ಕನಿಷ್ಠ ಏಳು ದಿನ ಮುಂಚಿತವಾಗಿಯೇ ನೋಟಿಸ್ ನೀಡಬೇಕು ಎಂದು ಆದೇಶಿಸಿದೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಮತ್ತು ಕೆಲ ಮಹಿಳೆಯರು ದೇಗುಲ ಪ್ರವೇಶಿಸಿದ ಕಾರಣಕ್ಕೆ ರಾಜ್ಯದಲ್ಲಿ ಸರಣಿ ಹರತಾಳ ನಡೆಯುತ್ತಿದ್ದು, ಇದರಿಂದಾಗಿ 2018ರಲ್ಲಿ 97 ಕೆಲಸದ ದಿನಗಳು ನಷ್ಟವಾಗಿವೆ. ಹರತಾಳದಿಂದ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಭಾರಿ ನಷ್ಟ ಅನುಭವಿಸಿದೆ. ಹೀಗಾಗಿ ದಿಢೀರ್ ಹರತಾಳ ನಿಷೇಧಿಸಬೇಕು ಎಂದು ವಾಣಿಜ್ಯ ಮಂಡಳಿ ಮನವಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!