ಮಣಿಶಂಕರ್ ಅಯ್ಯರ್ 
ದೇಶ

ರಾಮ ಎಲ್ಲಿ ಹುಟ್ಟಿದ್ದೋ ಯಾರಿಗೆ ಗೊತ್ತು? ಮಸೀದಿ ಧ್ವಂಸ ಮಾಡಿದ್ದು ದೇಶದ ಅವನತಿ: ಮಣಿಶಂಕರ್ ಅಯ್ಯರ್

ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಈ ಬಾರಿ ಮತ್ತೊಂದು ವಿವಾದವನ್ನು ಅಲ್ಲಲ್ಲ, ಸರಣಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನವದೆಹಲಿ: ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಈ ಬಾರಿ ಮತ್ತೊಂದು ವಿವಾದವನ್ನು ಅಲ್ಲಲ್ಲ, ಸರಣಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 
ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆಯ ರಾಮ ಮಂದಿರದ ವಿಷಯದಲ್ಲಿ ಚರ್ಚೆಗೀಡಾಗುವಂತಹ ಸರಣಿ ಹೇಳಿಕೆಗಳನ್ನು ಏಕ್ ಶಾಮ್ ಬಾಬ್ರಿ ಮಸ್ಜೀದ್ ಕೆ ನಾಮ್ ಎಂಬ ಕಾರ್ಯಕ್ರಮದಲ್ಲಿ ಮಣಿಶಂಕರ್ ಅಯ್ಯರ್ ನೀಡಿದ್ದಾರೆ. ದಶರಥನ ಮಹಲಿನಲ್ಲಿ 1,000 ರೂಮ್ ಗಳಿದ್ದವು ಈ ಪೈಕಿ ರಾಮ ಎಲ್ಲಿ ಹುಟ್ಟಿದ್ದೋ ಯಾರಿಗೆ ಗೊತ್ತಿರುತ್ತೆ? ನಿಖರವಾಗಿ ಹೇಗೆ ಹೇಳುತ್ತಾರೆ? ಎಂದು ಪ್ರಶ್ನಿಸಿರುವುದು ಮಣಿಶಂಕರ್ ಅಯ್ಯರ್ ಅವರ ಪ್ರಮುಖ ಹೇಳಿಕೆಗಳಲ್ಲಿ ಒಂದಾಗಿದೆ. 
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ- ರಾಮ ಮಂದಿರದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ, ಬಾಬ್ರಿ ಮಸೀದಿ ಧ್ವಂಸಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ಕಾಂಗ್ರೆಸ್ಸಿಗ ಬಾಬ್ರಿ ಮಸೀದಿ ವಿಷಯದಲ್ಲಿ ತಪ್ಪು ಮಾಡಿದ್ದೇವೆ. ಅಂದಿನ ಪ್ರಧಾನಿ ಪಿ.ವಿ ನರಸಿಂಹ ರಾವ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಆದ್ದರಿಂದ ತಪ್ಪು ಸಂಭವಿಸಿತು. ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗಿದ್ದ ಹಿಂದೂ ಪರವಾದ ಧೋರಣೆ 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳ್ಳಲು ಪ್ರೇರಣೆಯಾಯಿತು. ಬಾಬ್ರಿ ಮಸೀದಿ ಧ್ವಂಸಗೊಂಡ ದಿನ ಭಾರತದ ಅವನತಿಯಾಗಿತ್ತು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಭಾರತವನ್ನು ವಿಭಜಿಸಲು ಎರಡನೇ ಯತ್ನವಾಗಿತ್ತು. ಬಾಬ್ರಿ ಮಸೀದಿ ಧ್ವಂಸಗೊಂಡಾಗ ಹಿಂದೂ-ಮುಸ್ಲಿಮರ ಏಕತೆಗೂ ಧಕ್ಕೆ ಉಂಟಾಯಿತು ಎಂದು ಮಣಿಶಂಕರ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮುಸ್ಲಿಮರ ಸಮಗ್ರತೆಯನ್ನು ಪ್ರಶ್ನಿಸುವುದು ಟ್ರೆಂಡ್ ಆಗಿದೆ. ದೇಶ ವಿಭಜನೆಯಾದಾಗ ನೀವು ಈ ನೆಲಕ್ಕೆ ನಿಷ್ಟೆ ತೋರಿ ಇಲ್ಲೇ ಉಳಿದವರು ನಿಮ್ಮನ್ನು ಪ್ರಶ್ನಿಸುವುದು, ಅನುಮಾನಿಸುವುದೆಂದರೆ ಈ ದೇಶದ ಸಮಗ್ರತೆಯನ್ನೇ ಪ್ರಶ್ನಿಸಿದಂತೆ, ಸಂವಿಧಾನವನ್ನು ಪ್ರಶ್ನಿಸಿದಂತೆ, ನಾನೊಬ್ಬ ಹಿಂದೂ ಹಾಗೂ ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಮಣಿಶಂಕರ್ ಅಯ್ಯರ್ ಸಭಿಕರಿಗೆ ತಿಳಿಸಿದ್ದಾರೆ. 
"ರಾಮ ಮಂದಿರ ಬೇಕಾದವರು ಮಂದಿರ ನಿರ್ಮಿಸಿಕೊಳ್ಳಲಿ ಆದರೆ ಮಂದಿರವನ್ನು ಅಲ್ಲೇ ನಿರ್ಮಿಸುವೆವು ಎಂದು ಹೇಳುವುದಕ್ಕೆ ಹೇಗೆ ಸಾಧ್ಯ? ದಶರಥನ ಮಹಲಿನಲ್ಲಿ 1,000 ರೂಮ್ ಗಳಿದ್ದವು ಈ ಪೈಕಿ ರಾಮ ಎಲ್ಲಿ ಹುಟ್ಟಿದ್ದೋ ಯಾರಿಗೆ ಗೊತ್ತಿರುತ್ತೆ"? ಎಂದು ಅಯ್ಯರ್ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT