ಮಂಜು 
ದೇಶ

ಅಜ್ಜಿಯಂತೆ ಬಂದು ಅಯ್ಯಪ್ಪನ ದರ್ಶನ ಪಡೆದ 36 ವರ್ಷದ ದಲಿತ ಮಹಿಳೆ!

ಮಹಿಳೆಯರು ಪ್ರತಿಭಟನಾಕಾರರಿಗೆ ಹೆದರಿ ಮಾರುವೇಷದಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದು, 36 ವರ್ಷದ....

ತಿರುವನಂತಪುರಂ: ಮಹಿಳೆಯರು ಪ್ರತಿಭಟನಾಕಾರರಿಗೆ ಹೆದರಿ ಮಾರುವೇಷದಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದು, 36 ವರ್ಷದ ಮಹಿಳೆಯೊಬ್ಬರು ವಯಸ್ಸಾದ ಅಜ್ಜಿಯಂತೆ ಮೇಕಪ್ ಮಾಡಿಕೊಂಡು ಬಂದು ಬುಧವಾರ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಅಜ್ಜಿಯ ವೇಷದಲ್ಲಿ ತೆರಳಿ ಇಂದು ಬೆಳಗ್ಗೆ 7.30ರ ಸುಮಾರಿಗೆ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಕೇರಳ ದಲಿತ ಮಹಿಳಾ ಫೆಡರೇಶನ್ ರಾಜ್ಯ ಕಾರ್ಯದರ್ಶಿಯಾದ ಎಸ್‌.ಪಿ. ಮಂಜು ಅವರು ಹೇಳಿದ್ದಾರೆ. ಅಲ್ಲದೆ ತಾನು ಶಬರಿಮಲೆಗೆ ಭೇಟಿ ನೀಡಿದ ವಿಡಿಯೋವನ್ನು ಸಮಾಜಿಕ ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ.
ಕೇರಳದ ದೇವಸ್ಥಾನವೊಂದರ ಪೂಜಾರಿಯ ಮಗಳಾಗಿರುವ ಮಂಜು ಮುಖಕ್ಕೆ ಮೇಕಪ್ ಮಾಡಿಕೊಂಡು ಶಬರಿಮಲೆಗೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಅಜ್ಜಿಯಂತೆ ಡ್ರೆಸ್ ಮಾಡಿಕೊಂಡು, ತಲೆಗೆ ಕೂದಲಿಗೆ ಪವಿದ್ರ ಬೂದಿ ಹಚ್ಚಿಕೊಂಡು ದೊಡ್ಡ ಕೀವಿಯೋಲೆ ಹಾಗೂ ಬಿಂದಿ ಧರಿಸಿಕೊಂಡು ದೇವಸ್ಥಾನಕ್ಕೆ ತೆರಳಿದೆ. ನಾನು ಇದೇ ಮೊದಲ ಬಾರಿಗೆ ಶಬರಿಮಲೆಗೆ ಭೇಟಿ ನೀಡಿದ್ದರಿಂದ ಇರುಮುಡಿಕಟ್ಟು ಹಾಗೂ ಪೂಜಾ ವಿಧಾನಗಳ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಅಯ್ಯಪ್ಪ ಸೇವಾ ಸಂಘಮ್ ಕಾರ್ಯಕರ್ತರ ಸಹಾಯ ಪಡೆದೆ ಎಂದು ಮಂಜು ತಿಳಿಸಿದ್ದಾರೆ.
ಬೆಟ್ಟದಲ್ಲಿ ಕೆಲವು ಜನ ನನ್ನನ್ನು ಗುರುತಿಸಿದರು. ಆದರೆ ಯಾರೂ ಪ್ರತಿಭಟಿಸಲಿಲ್ಲ ಎಂದು ದಲಿತ ನಾಯಕಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

SCROLL FOR NEXT