ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪ್ರಧಾನಿ ನೇತೃತ್ವದ ಸಮಿತಿಯಿಂದ ಇಂದು ಸಿಬಿಐ ನಿರ್ದೇಶಕ ವರ್ಮಾ ಭವಿಷ್ಯ ನಿರ್ಧಾರ

ಸುರ್ಸಪ್ರೀಂ ತೀರ್ಪಿನ ಬಳಿಕ ಈಗ ಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಭವಿಷ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಆಯ್ಕೆ ಸಮಿತಿಯು ನಿರ್ಧರಿಸಲಿದೆ.

ಅಲೋಕ್ ವರ್ಮಾ
Raghavendra Adiga
Updated On : 9 Jan 2019, 6:35 am
ನವದೆಹಲಿ: ಸುರ್ಸಪ್ರೀಂ ತೀರ್ಪಿನ ಬಳಿಕ ಈಗ ಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಭವಿಷ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಆಯ್ಕೆ ಸಮಿತಿಯು ನಿರ್ಧರಿಸಲಿದೆ. ಬುಧವಾರ ರಾತ್ರಿ ಸಭೆ ಸೇರಲಿರುವ ಸಮಿತಿ ಈ ಹಿಂದೆ ಬಲವಂತವಾಗಿ ಸುದೀರ್ಘ ರಜೆಗೆ ಕಳುಹಿಸಲ್ಪಟ್ಟ ವರ್ಮಾ ಅವರ ಕುರಿತಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.
ಮಂಗಳವಾರ ಸುಪ್ರೀಂ ಕೋರ್ಟ್ ಅಲೋಕ್ ವರ್ಮಾ ಅವರನ್ನೇ ಸಿಬಿಐ ನಿರ್ದೇಶಕರಾಗಿ ಮುಂದುವರಿಸಬೇಕೆಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ ಇಂದು ರಾತ್ರಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿಗಳ ನಿವಾಸದಲ್ಲಿ ಸಭೆ ನಡೆಯಲಿದೆ.
ಎರಡು ತಿಂಗಳ ಹಿಂದೆ ಸರ್ಕಾರ ತೆಗೆದುಕೊಂಡಿದ್ದ "ಮದ್ಯರಾತ್ರಿಯ ಮಹಾದೇಶ"ವನ್ನು ಅನೂರ್ಜಿತಗೊಳಿಸಿದ್ದ ಕೋರ್ಟ್ ವರ್ಮಾಗೆ ಪುನಃ ಅವರ ಅಧಿಕಾರ ನೀಡುವಂತೆ ಹೇಳಿದೆ. ಸಿಬಿಐ ನಿರ್ದೇಆಕ ವರ್ಮಾ ಹಾಗೂ ಉಪನಿರ್ದೇಶಕ ರಾಕೇಶ್ ಅಸ್ತಾನಾ ಅವರ ನಡುವೆ ಭ್ರಷ್ಟಾಚಾರ ಕುರಿತ ಸಂಘರ್ಷ ಸಿಬಿಐ ನ ಒಳಜಗಳವನ್ನು ಬಹಿರಂಗಗೊಳಿಸಿತ್ತು. ಇದರ ಬೆನ್ನಲ್ಲೇ ಸರ್ಕಾರ ಇಬ್ಬರನ್ನೂ ಸುದೀರ್ಘ ರಜೆ ಮೇಲೆ ಕಳಿಸಿ ಆದೇಶಿಸಿತ್ತು.

Advertisement

Advertisement

ಇಷ್ಟಾಗಿಯೂ ನಿನ್ನೆಯ ತೀರ್ಪಿನಲ್ಲಿ ಕೋರ್ಟ್ ನ್ಯಾಯಾಲಯವು ಯಾವುದೇ ಪ್ರಮುಖ ನೀತಿ ನಿರೂಪಣೆಯ ಕುರಿತು ತೀರ್ಮಾನ ನ್ತೆಗೆದುಕೊಳ್ಳುವುದಿಲ್ಲ ಎಂದಿದ್ದು  "ಅಧಿಕಾರ ಹಂಚಿಕೆ’ವಿಚಾರವನ್ನು ಉನ್ನತ ಸಮಿತಿಯ ಪರಿಗಣನೆಗೆ ಬಿಟ್ಟಿರುವುದಾಗಿ ಹೇಳೀದೆ.
ಸಿಬಿಐ ನಿರ್ದೇಶಕ ವರ್ಮಾ ಅವರ ಎರಡು ವರ್ಷಗಳ ಅವಧಿ ಜನವರಿ 31 ರಂದು ಕೊನೆಗೊಳ್ಳಲಿದೆ.  ಅವರು ಸುಪ್ರೀಂ ತೀರ್ಪಿನ ಬೆನ್ನಲ್ಲೇ ಸಿಬಿಐ ಕಛೇರಿಗೆ ಆಗಮಿಸಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಪ್ರಧಾನಿ ನೇತೃತ್ವದ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ  ರಂಜನ್ ಗೊಗೊಯ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಇರಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments