ದೇಶ

ರಾಜಸ್ತಾನದಲ್ಲಿ ಅವಧಿ ಮುಗಿದ ಔಷಧ ತಿಂದು 9 ಮಕ್ಕಳು ಅಸ್ವಸ್ಥ; ತನಿಖೆಗೆ ಆದೇಶ

Sumana Upadhyaya

ಬಾಣ್ಸ್ವಾರ: ರಾಜಸ್ತಾನದ ಬಾಣ್ಸ್ವಾರದ ಗ್ರಾಮವೊಂದರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಅವಧಿ ಮುಗಿದ ಔಷಧಿಯನ್ನು ನೀಡಿದ ಘಟನೆ ನಡೆದಿದೆ.

ಬಾಣ್ಸ್ವಾರದ ಪಲಕ್ಪ್ರರ ಗ್ರಾಮದ ಸ್ಥಳೀಯರು ಔಷಧ ತಿಂದು 9 ಮಕ್ಕಳು ಅಸ್ವಸ್ಥಕ್ಕೀಡಾದ ನಂತರ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಅಸೌಖ್ಯಕ್ಕೀಡಾದ ಮಕ್ಕಳು ಕುಶಾಲ್ ಗರ್ ಪ್ರಾಥಮಿಕ ಕೇಂದ್ರಕ್ಕೆ ದಾಖಲಾಗಿದ್ದಾರೆ.

ಜಿಲ್ಲಾ ಪ್ರಾಥಮಿಕ ಕೇಂದ್ರ ಪ್ರಕರಣದ ವರದಿಯನ್ನು ತರಿಸಿಕೊಂಡು ಅವಧಿ ಮುಗಿದ ಔಷಧಿ ನೀಡಿದ ಬಗ್ಗೆ ತನಿಖೆಗೆ ಆದೇಶ ನೀಡಿದೆ.

ಔಷಧಿಯನ್ನು ಸಂಗ್ರಹಿಸಿ ತನಿಖೆಗೆ ಒಪ್ಪಿಸುವಂತೆ ಉಪ ಮುಖ್ಯ ಆರೋಗ್ಯಾಧಿಕಾರಿ ರಮೇಶ್ ಶರ್ಮಾ ಆದೇಶ ನೀಡಿದ್ದಾರೆ. ಮಕ್ಕಳ ತಜ್ಞರು ಪರೀಕ್ಷೆ ಮಾಡಿದ್ದು ಮೂವರು ಮಕ್ಕಳು ಜಿಲ್ಲಾಸ್ಪತ್ರೆಗೆ ಮತ್ತು ಇತರರು ಆರೋಗ್ಯ ಕೇಂದ್ರಗಳಿಗೆ ದಾಖಲಾಗಿದ್ದಾರೆ. ವೈದ್ಯರು ಮತ್ತು ದಾದಿಯರು ಮಕ್ಕಳ ಪರೀಕ್ಷೆ ನಡೆಸಲಿದ್ದಾರೆ ಎಂದರು.



ಜಿಲ್ಲಾಧಿಕಾರಿಗಳು ಘಟನೆಯ ವರದಿ ತರಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.

SCROLL FOR NEXT