ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ 
ದೇಶ

ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ

ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಶ್ವ ಹಿಂದೂ ಪರಿಷತ್ ೯ವಿಎಚ್ ಪಿ) ಮಾಜಿ ಅಧ್ಯಕ್ಷ ವಿಷ್ಣು ಹರಿ ದಾಲ್ಮಿಯಾ ಬುಧವಾರ ತಮ್ಮ ನಿವಾಸದ...

ನವದೆಹಲಿ: ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ  ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಮಾಜಿ ಅಧ್ಯಕ್ಷ ವಿಷ್ಣು ಹರಿ ದಾಲ್ಮಿಯಾ ಬುಧವಾರ  ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ದಾಲ್ಮಿಯಾ 9.38ಕ್ಕೆ ದೆಹಲಿಯ  ಗಾಲ್ಫ್ ಲಿಂಕ್ಸ್ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ವಿಷ್ಣು ಹರಿ ದಾಲ್ಮಿಯಾ ಅವರು ಇಂದು ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.ಸಂಜೆ ನಿಗಂಬೋಡ್ ಘಾಟ್ ನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವಿಎಚ್ ಪಿಹೇಳಿಕೆಯಲ್ಲಿ ತಿಳಿಸಿದೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ದಾಲ್ಮಿಯಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆ ನಂತರ  ಜನವರಿ 13ರಂದು  ಮತ್ತೆ ಮನೆಗೆ ಹಿಂತಿರುಗಿದ್ದರು.
ದಾಲ್ಮಿಯಾ ಶ್ರೀ ರಾಮಜನ್ಮಭೂಮಿ ನಿವಾಸ್ ನ ಟ್ರಸ್ಟಿಯೂ, ವಿಎಚ್ ಪಿ ಕೇಂದ್ರೀಯ ಮಾರ್ಗದರ್ಶಕ್ ಮಂಡಲ್ ನ ಸದಸ್ಯರೂ ಆಗಿದ್ದರು. ಹಿರಿಯ ವಿಎಚ್ಪಿ ಮುಖಂಡರಾದ ಅಶೋಕ್ ಸಿಂಘಾಲ್ ಮತ್ತು ಗಿರಿರಾಜ್ ಕಿಶೋರ್ ಅವರೊಂದಿಗೆ ರಾಮ್ ಜನ್ಮಭೂಮಿ ಆಂದೋಲನದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ದಾಲ್ಮಿಯಾ ಕೂಡ ಒಬ್ಬರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ