ರಕ್ಷಣಾ ಸಿಬ್ಬಂದಿ 
ದೇಶ

ಲಡಾಖ್ ನಲ್ಲಿ ಭಾರೀ ಹಿಮಪಾತ: 10 ಮಂದಿ ನಾಪತ್ತೆ

ಲಡಾಖ್ ಬಳಿಯ ಲೇಹ್ ಜಿಲ್ಲೆಯಲ್ಲಿ ಇಂದು ಹಠಾತ್ ಹಿಮಪಾತಕ್ಕೆ ಸಿಲುಕಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಶ್ರೀನಗರ: ಲಡಾಖ್ ಬಳಿಯ ಲೇಹ್ ಜಿಲ್ಲೆಯಲ್ಲಿ ಇಂದು  ಹಠಾತ್ ಹಿಮಪಾತಕ್ಕೆ ಸಿಲುಕಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಖಾರ್ ದುಂಗ್ ಲಾ ಮೂಲಕ ಟ್ರಕ್ ನಲ್ಲಿ ತೆರಳುತ್ತಿದ್ದವರು ನಾಪತ್ತೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರ  ವಿಪತ್ತು ನಿರ್ವಹಣಾ ಪಡೆ ಹಾಗೂ  ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ಬಗ್ಗೆ ಗುರುವಾರವೇ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿತ್ತು.

ಜಮ್ಮು- ಕಾಶ್ಮೀರದ ಅನಂತ್ ನಾಗ್, ಬುದ್ ಗಂ, ಬಾರಮುಲ್ಲಾ, ಬಂಡಿಪೊರಾ, ಗಂಡೆರ್ ಬಲ್,  ಕಾರ್ಗಿಲ್, ಕುಲ್ಗಾಂ, ಕುಪ್ವಾರ ಮತ್ತು ಲೇಹ್ ಜಿಲ್ಲೆಯಲ್ಲಿ ಭಾರೀ ಹಿಮಾಪಾತವಾಗಲಿದೆ ಎಂದು ಹವಾಮಾನ ಇಲಾಖೆಯ ನಿನ್ನೆ ಮುನ್ಸೂಚನೆ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್: ಲೋಕಭವನದಲ್ಲೇ ಸರಳ ಸಮಾರಂಭ; ಸಾರ್ವಜನಿಕರಿಗೆ ಪ್ರವೇಶ ಇಲ್ಲ

ನಾನ್ ಯಾರಿಗಾದ್ರೂ ಅನ್ಯಾಯ ಮಾಡಿದ್ರೆ ಅದು ಅವನಿಗೆ ಮಾತ್ರ: ಸಿದ್ದರಾಮಯ್ಯ ಹಳೇ Video ವೈರಲ್!

CM ಬದಲಾವಣೆ ಆಯಿತು, ಈಗ BJP ರಾಜ್ಯಾಧ್ಯಕ್ಷರು ಕೆಳಗಿಳಿಯುತ್ತಾರೆ; ಮಹಿಳೆಗೆ ನಾಯಕತ್ವ: ಖ್ಯಾತ ಜ್ಯೋತಿಷಿ ಭವಿಷ್ಯ!

IPL 2026: ಶುಭಮನ್ ಗಿಲ್ ಶತಕದ ವೈಭವ, ಸಿಧು ಮೂಸೆವಾಲಾ ಶೈಲಿಯಲ್ಲಿ ಸಂಭ್ರಮಿಸಿದ ತಂದೆ! Video

Karnataka CM News LIVE Updates | ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಲೋಕಭವನದಲ್ಲಿ ಪ್ರಮಾಣವಚನ!

SCROLL FOR NEXT