'ಬೇರೆ ಸಾಧುಗಳು ಬಟ್ಟೆ ಧರಿಸುವುವಿಲ್ಲ ಆದರೆ ನೀವು....?': ನಾಗಾ ಸಾಧು ನೀಡಿದ ಉತ್ತರಕ್ಕೆ ಓಟ ಕಿತ್ತ ಪತ್ರಕರ್ತೆ!
ಪ್ರಯಾಗ್ ರಾಜ್: ಸಾಧು ಸಂತರಿಗೆ ಅನುಚಿತ ಪ್ರಶ್ನೆಗಳನ್ನು ಕೇಳಬಾರದೆಂಬ ನಂಬಿಕೆ ಇದೆ. ಆದರೆ ಅದರಲ್ಲಿಯೂ ನಾಗಾಸಾಧುಗಳ ಬಳಿ ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು.
ಆದರೆ ಇಲ್ಲೊಬ್ಬ ಪತ್ರಕರ್ತೆ ಸಾಮಾನ್ಯರಿಗೆ ಪ್ರಶ್ನೆ ಕೇಳುವ ರೀತಿಯಲ್ಲಿ ನಾಗಾಸಾಧುವಿಗೂ ಕೇಳಿ ತಕ್ಕ ಪ್ರತ್ಯುತ್ತರ ಪಡೆದಿದ್ದಾರೆ.
ಸಾಮಾನ್ಯವಾಗಿ ನಾಗಾ ಸಾಧುಗಳು ಯಾವುದೇ ವಸ್ತ್ರ ಧರಿಸುವುದಿಲ್ಲ, ಕೇವಲ ಭಸ್ಮ ಧಾರಣೆ ಮಾಡಿಕೊಳ್ಳುತ್ತಾರೆ. ಆದರೆ ಕುಂಭಮೇಳಕ್ಕೆ ಆಗಮಿಸಿದ್ದ ನಾಗಾಸಾಧು ಒಬ್ಬರು ವಸ್ತ್ರ ಧರಿಸಿ ನಡೆಯುತ್ತಿದ್ದರು. ಈ ವೇಳೆ ಎದುರಾದ ಪತ್ರಕರ್ತೆಯೊಬ್ಬರು ನಾಗಾಸಾಧುವನ್ನು ಸಂದರ್ಶಿಸಲು ಯತ್ನಿಸಿದರು. ಆದರೆ ಅದೇ ಸಮಯದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ನಾಗಾಸಾಧುವನ್ನು ಬಟ್ಟೆ ಧರಿಸಿಕೊಂಡಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ.
"ನಿಮ್ಮದು 12 ವರ್ಷಗಳ ಸಂಕಲ್ಪ ಎನ್ನುತ್ತೀರಿ, ಆದರೆ ಕೆಲವು ಸಾಧುಗಳು ಬಟ್ಟೆ ಧರಿಸುವುದಿಲ್ಲ. ಆದರೆ ನೀವು ಬಟ್ಟೆ ಧರಿಸಿದ್ದೀರಿ ಎಂದು ಹೇಳಿ ಮುಗಿಸುವ ಮುನ್ನವೇ ನಾಗಾಸಾಧು ಧರಿಸಿದ್ದ ವಸ್ತ್ರವನ್ನು ಕಳಚಿದ್ದಾರೆ. ಪತ್ರಕರ್ತೆ ನಾಗಾಸಾಧು ನೀಡಿದ ಪ್ರತಿಕ್ರಿಯೆಗೆ ಓಟ ಕಿತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.