ಸಂಗ್ರಹ ಚಿತ್ರ 
ದೇಶ

ಭೀಕರ ದೃಶ್ಯ: ಸಿಂಹಗಳ ಬೋನಿಗೆ ನುಗ್ಗಿದ ವ್ಯಕ್ತಿ, ಆತನ ದೇಹವನ್ನು ಸೀಳಿದ ಸಿಂಹಗಳು!

ಭಂಡ ಧೈರ್ಯ ಮಾಡಿದ ವ್ಯಕ್ತಿಯೊರ್ವ 20 ಅಡಿ ಎತ್ತರ ಗೋಡೆಯನ್ನು ಹತ್ತಿ ಸಿಂಹಗಳಿದ್ದ ಬೋನಿಗೆ ನುಗ್ಗಿದ್ದ ಪರಿಣಾಮ ಸಿಂಹಗಳ ದಾಳಿಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಚಂಢಿಗಡ್: ಭಂಡ ಧೈರ್ಯ ಮಾಡಿದ ವ್ಯಕ್ತಿಯೊರ್ವ 20 ಅಡಿ ಎತ್ತರ ಗೋಡೆಯನ್ನು ಹತ್ತಿ ಸಿಂಹಗಳಿದ್ದ ಬೋನಿಗೆ ನುಗ್ಗಿದ್ದ ಪರಿಣಾಮ ಸಿಂಹಗಳ ದಾಳಿಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಿದ್ದಾನೆ. 
ಪಂಜಾಬ್ ರಾಜ್ಯದ ಛಾಟ್ಬಿರ್ ಮೃಗಾಲಯದಲ್ಲಿ ಈ ಭೀಕರ ಘಟನೆ ನಡೆದಿದೆ. ಭಾನುವಾರ ವ್ಯಕ್ತಿಯೋರ್ವ ನಿಷೇಧಿತ ಪ್ರದೇಶ ಎಂಬ ಸೂಚನ ಫಲಕವಿದ್ದರೂ ಭಂಡ ಧೈರ್ಯ ಮಾಡಿ ನಾಲ್ಕು ಸಿಂಹಗಳಿದ್ದ ಬೋನಿನೊಳಗೆ ನುಗ್ಗಿದ್ದಾನೆ ಕೂಡಲೇ ಸಿಂಹಗಳು ಆತನ ಮೇಲೆ ದಾಳಿ ಮಾಡಿವೆ.
ನಂತರ ವ್ಯಕ್ತಿಯ ಚೀರಾಟ ಕಂಡ ಭದ್ರತಾ ಸಿಬ್ಬಂದಿಗಳು ಓಡಿ ಬಂದು ಆತನ ರಕ್ಷಣೆಗೆ ಮುಂದಾಗಿದ್ದಾರೆ. ಶತಾಯ ಪ್ರಯತ್ನ ಮಾಡಿ ಸಿಂಹಗಳಿಂದ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ರಾಜ್ಯ ಅರಣ್ಯ ಇಲಾಖೆ ಅಧಿಕಾರಿ ರೋಶನ್ ಸುಂಕರಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT