ಸೋನಿಯಾ, ರಾಹುಲ್ ಗಾಂಧಿ 
ದೇಶ

ಜ.23 ಮತ್ತು 24 ರಂದು ಸೋನಿಯಾ,ರಾಹುಲ್ ಗಾಂಧಿ ತಮ್ಮ ಕ್ಷೇತ್ರಗಳಿಗೆ ಭೇಟಿ?

ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನವರಿ 23 ಮತ್ತು 24 ರಂದು ಉತ್ತರ ಪ್ರದೇಶದಲ್ಲಿನ ತಮ್ಮ ಕ್ಷೇತ್ರಗಳಾದ ಕ್ರಮವಾಗಿ ರಾಯ್ ಬರೇಲಿ ಹಾಗೂ ಅಮೇಥಿಗೆ ಭೇಟಿ ನೀಡುವ ಸಾಧ್ಯತೆ ಇದೆ

ನವದೆಹಲಿ: ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನವರಿ 23 ಮತ್ತು 24 ರಂದು  ಉತ್ತರ ಪ್ರದೇಶದಲ್ಲಿನ ತಮ್ಮ ಕ್ಷೇತ್ರಗಳಾದ ಕ್ರಮವಾಗಿ  ರಾಯ್ ಬರೇಲಿ ಹಾಗೂ ಅಮೇಥಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಎರಡು ದಿನಗಳ ಭೇಟಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥರು ಅನೇಕ ಕಾರ್ಯಕ್ರಮಗಳನ್ನು ಪಾಲ್ಗೊಳ್ಳಲಿದ್ದು, ಜಿಲ್ಲಾ ವೀಕ್ಷಕರು ಹಾಗೂ ಮೇಲ್ವಿಚಾರಣಾ ಸಮಿತಿಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಯ್ ಬರೇಲಿಯಲ್ಲಿ ಜಿಲ್ಲಾ ವೀಕ್ಷಕರು ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸೋನಿಯಾಗಾಂಧಿ ಕೂಡಾ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಜನವರಿ 23 ರಂದು ಫರ್ಸಾಂತ್ ಗಂಜ್  ವಿಮಾನ ನಿಲ್ದಾಣಕ್ಕೆ ಆಗಮಿಸುವ  ಸೋನಿಯಾ ಹಾಗೂ ರಾಹುಲ್ ಗಾಂಧಿ, ನಂತರ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಜನವರಿ 24 ರಂದು ಅವರು ದೆಹಲಿಗೆ ಹಿಂತಿರುಗಲಿದ್ದಾರೆ ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT