'ಮಹಾಘಟಬಂಧನ'ಕ್ಕೂ ಮುನ್ನವೇ ಪ್ರಧಾನಿ ಹುದ್ದೆಗಾಗಿ ಪೈಪೋಟಿ: ಉತ್ತರ ಪ್ರದೇಶದಲ್ಲಿ ಅಖಿಲೇಶ್ ಪೋಸ್ಟರ್
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣೆ ಎದುರಿಸುವುದಕ್ಕೆ ಎಲ್ಲಾ ವಿಪಕ್ಷಗಳೂ ಒಟ್ಟಾಗಿ ಮಹಾಘಟಬಂಧನ ಇನ್ನಷ್ಟೇ ಪೂರ್ಣಪ್ರಮಾಣದಲ್ಲಿ ರಚನೆಯಾಗಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣೆ ಎದುರಿಸುವುದಕ್ಕೆ ಎಲ್ಲಾ ವಿಪಕ್ಷಗಳೂ ಒಟ್ಟಾಗಿ ಮಹಾಘಟಬಂಧನ ಇನ್ನಷ್ಟೇ ಪೂರ್ಣಪ್ರಮಾಣದಲ್ಲಿ ರಚನೆಯಾಗಬೇಕಿದೆ. ಆದರೆ ಮಹಾಘಟಬಂಧನ ರಚನೆಯಾಗುವುದಕ್ಕೂ ಮುನ್ನವೇ ಪ್ರಧಾನಿ ಹುದ್ದೆಗಾಗಿ ಪೈಪೋಟಿ ಪ್ರಾರಂಭವಾಗಿದೆ.
ಉತ್ತರ ಪ್ರದೇಶದ ಲಖನೌದಲ್ಲಿ ಅಖಿಲೇಶ್ ಯಾದವ್ ಅವರು ದೇಶದ ಮುಂದಿನ ಪ್ರಧಾನಿ ಎಂಬ ಪೋಸ್ಟರ್ ಗಳನ್ನು ಹಾಕಲಾಗಿದ್ದು, ಎಸ್ ಪಿ-ಬಿಎಸ್ ಪಿ ಮೈತ್ರಿಯ ಬೆನ್ನಲ್ಲೇ ಈ ಪೋಸ್ಟರ್ ಕಾಣಿಸಿಕೊಂಡಿದೆ. ಲಖನೌನ ಹಲವು ಪ್ರದೇಶಗಳಲ್ಲಿ ಈ ಬ್ಯಾನರ್ ಕಂಡುಬಂದಿದ್ದು, ಅಖಿಲೇಶ್ ಯಾದವ್ ಅವರ ನಿರ್ಮಾಣ ಹಂತದಲ್ಲಿರುವ ಮನೆ, ಎಸ್ ಪಿ ಕೇಂದ್ರ ಕಚೇರಿ ಮುಂಭಾಗದಲ್ಲಿಯೂ ಸಹ ಇದೇ ಪೋಸ್ಟರ್ ಗಳನ್ನು ಹಾಕಲಾಗಿದೆ.
ನಮಗೆ ಅಖಿಲೇಶ್ ಯಾದವ್ ಅವರಲ್ಲಿ ನಂಬಿಕೆ ಇದೆ, ದೇಶಕ್ಕೆ ಹೊಸ ಮುಖ್ಯಮಂತ್ರಿ ಬೇಕಿದೆ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಜ.15 ರಂದು ಬಿಎಸ್ ಪಿ ನಾಯಕಿ ಮಾಯಾವತಿ ಹುಟ್ಟು ಹಬ್ಬವನ್ನು ಆಚರಿಸಿದ್ದ ವೇಳೆಯಲ್ಲೂ ಮಾಯಾವತಿ ದೇಶದ ಮುಂದಿನ ಪ್ರಧಾನಿ ಎಂಬ ಪೋಸ್ಟರ್ ನ್ನು ಹಾಕಲಾಗಿತ್ತು.