ನವದೆಹಲಿ: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಹಾದಿಯಲ್ಲಿ ಭಾರತ ಸಾಗುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕಾ, ಚೀನಾ, ಜಪಾನ್, ಜರ್ಮನಿ, ಮತ್ತು ಇಂಗ್ಲೆಂಡ್ ಹೊರತು ಪಡಿಸಿದರೆ ಪ್ರಸ್ತುತ ಭಾರತ 2.6 ಟ್ರಿಲಿಯನ್ ಅಮೆರಿಕನ್ ಡಾಲರ್ ನೊಂದಿಗೆ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತಿತರ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಹಾದಿಯಲ್ಲಿದ್ದೇವೆ ಎಂದರು.
ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ದಿ ಮೇಲಿನ ಸಮಿತಿ ಪಟ್ಟಿಯಲ್ಲಿ ಹೂಡಿಕೆಯ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಆದರೆ, ಸಮಾಧಾನವಿಲ್ಲ. ದಿನನಿತ್ಯದ ಆಧಾರದ ಮೇಲೆ" ಸುಧಾರಣೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುವ ಮೂಲಕ ಆರ್ಥಿಕತೆ ಬದಲಾವಣೆಗಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.