ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನಾನು ಎಲ್ಲಾ ಸಚಿವರುಗಳಿಗೂ ತಂದೆ: ಮಧ್ಯಪ್ರದೇಶ ಬಿಎಸ್ಪಿ ಶಾಸಕಿ

ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ನಾನು ಕೆಲಸ ಮಾಡುತ್ತೇನೆ. ಆಡಳಿತದ ವಿಚಾರಕ್ಕೆ ಬಂದರೇ ನಾನು ಎಲ್ಲ ಸಚಿವರಿಗೂ ಅಪ್ಪ, ನಾನೇ ಕಿಂಗ್ ಮೇಕರ್ ಎಂದು ...

ರಮಾಬಾಯಿ ಸಿಂಗ್
Shilpa D
Updated On : 26 Jan 2019, 1:59 am
ಮಧ್ಯ ಪ್ರದೇಶ: ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ನಾನು ಕೆಲಸ ಮಾಡುತ್ತೇನೆ. ಆಡಳಿತದ ವಿಚಾರಕ್ಕೆ ಬಂದರೇ ನಾನು ಎಲ್ಲ ಸಚಿವರಿಗೂ ಅಪ್ಪ, ನಾನೇ ಕಿಂಗ್ ಮೇಕರ್ ಎಂದು ಮಧ್ಯಪ್ರದೇಶದ ಬಹುಜನ್ ಸಮಾಜ ಪಕ್ಷ(ಬಿಎಸ್‍ಪಿ) ಶಾಸಕಿ ರಮಾಬಾಯಿ ಹೇಳಿದ್ದಾರೆ.
ಪಥರಿಯಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕಿ ರಮಾಬಾಯಿ ತನಗೆ ಮಂತ್ರಿ ಸ್ಥಾನ ಕೊಡದಿದ್ದರೂ ಜನಕ್ಕಾಗಿ ಒಳ್ಳೆ ಕೆಲಸ ಮಾಡುತ್ತೇನೆ ಎಂದಿದ್ದಾರೆ. 
ಮಧ್ಯಪ್ರದೇಶದಲ್ಲೂ ಕರ್ನಾಟಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ರಚಿಸಲು ಕಾಂಗ್ರೆಸ್ ಗೆ ಬಿಎಸ್ ಪಿ ನೆರವು ನೀಡಿದೆ. ಸಚಿವೆಯಾದರೇ ಜನರಿಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಮಂತ್ರಿಯಾಗದಿದ್ದರೂ ಸರಿಯಾಗಿ ಕೆಲಸ ಮಾಡುತ್ತೇನೆ. ನಾನು ಒಂದು ರೀತಿ ಮಂತ್ರಿಗಳಿಗೆ ತಂದೆ, ನಾನೇ ಸರ್ಕಾರವನ್ನು ರಚಿಸಿದ್ದು ಎಂದು ಹೇಳಿದ್ದಾರೆ.

Advertisement

Advertisement

ಈ ಹಿಂದೆ ಜ. 23ರಂದು ಕರ್ನಾಟಕದಲ್ಲಿ ಆಗುತ್ತಿರುವ ರಾಜಕೀಯ ಡ್ರಾಮಾದಂತೆ ಮಧ್ಯಪ್ರದೇಶದಲ್ಲಿ ಆಗುವುದು ಬೇಡ. ನನಗೆ ಸಚಿವ ಸ್ಥಾನ ಕೊಡಿ ಆಗ ಸರ್ಕಾರ ಚೆನ್ನಾಗಿರುತ್ತೇ ಅಂತ ರಮಾಬಾಯಿ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಸರ್ಕಾರಕ್ಕೆ ಆಗ್ರಹಿಸಿದ್ದರು. ಹಾಗೆಯೇ ಜ. 7ರಂದು ಸಂಜೀವ್ ಸಿಂಗ್ ಕುಶ್ವಾಹಗೆ ಹಾಗೂ ನನಗೆ ಸಚಿವ ಸ್ಥಾನ ಕೊಡಿ ಎಂದು ಸರ್ಕಾರವನ್ನು ಕೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments