ಪದ್ಮ ಶ್ರೀ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ ಒಡಿಶಾ ಸಿಎಂ ಸಹೋದರಿ!: ಕಾರಣ ಗೊತ್ತೇ?
ಭುವನೇಶ್ವರ್: ತಮಗೆ ಘೋಷಿಸಲಾಗಿದ್ದ ಪದ್ಮ ಪ್ರಶಸ್ತಿಯನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸಹೋದರಿ ಗೀತಾ ಮೆಹ್ತಾ ಅವರು ನಯವಾಗಿ ನಿರಾಕರಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸದೇ ಇರುವುದಕ್ಕೆ ತಮ್ಮದೇ ಆದ ಕಾರಣವನ್ನು ನೀಡಿರುವ ಗೀತಾ ಮೆಹ್ತಾ, ಪದ್ಮ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವ ಕೇಂದ್ರ ಸರ್ಕಾರ ಗೌರವ ನೀಡಿದೆ. ಆಡರೆ ನಾನು ನಾನು ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂಬುದನ್ನು ವಿಷಾದದಿಂದ ಹೇಳುತ್ತಿದ್ದೇನೆ ಎಂದು ಗೀತಾ ಮೆಹ್ತಾ ಹೇಳಿದ್ದಾರೆ.
"ಹತ್ತಿರದಲ್ಲೇ ಲೋಕಸಭಾ ಚುನಾವಣೆ ಇದೆ, ಈ ವೇಳೆ ನಾನು ಪದ್ಮ ಪ್ರಶಸ್ತಿಯನ್ನು ಸ್ವೀಕರಿಸಿದರೆ ಅದಕ್ಕೆ ತಪ್ಪಾದ ಅರ್ಥಗಳು ಬರುತ್ತವೆ", ಆದ್ದರಿಂದ ನಾನು ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ ಎಂಬುದನ್ನು ವಿಷಾದದಿಂದ ಹೇಳುತ್ತಿದ್ದೇನೆ" ಎಂದು ಗೀತಾ ಮೆಹ್ತಾ ತಿಳಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ಸಹ ಪದ್ಮ ಪ್ರಶಸ್ತಿ ಗಳಿಸಿರುವ ತಮ್ಮ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.