ದೇಶ

ಮೈನಸ್​ 30 ಡಿಗ್ರಿ ತಾಪಮಾನ, 11000 ಅಡಿ ಎತ್ತರದಲ್ಲಿ ಸೈನಿಕರಿಂದ ಸಮರಕಲೆ ತರಬೇತಿ!

Srinivasamurthy VN
ಡೆಹ್ರಾಡೂನ್: 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ಮೈನಸ್​ 30 ಡಿಗ್ರಿ ತಾಪಮಾನದ ನಡುವೆಯೇ 18 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದ ಐಟಿಬಿಪಿ ಸಿಬ್ಬಂದಿ ಇದೀಗ ಮತ್ತೊಂದು ಸಾಹಸ ಮರೆದಿದ್ದಾರೆ.
ಹೌದು.. ಐಟಿಬಿಪಿ ಸೈನಿಕರು ಇದೀಗ ಉತ್ತರಾಖಂಡದ ಔಲಿ ಎಂಬಲ್ಲಿ ಸುಮಾರು 11 ಸಾವಿರ ಅಡಿ ಎತರದಲ್ಲಿ ಮೈನಸ್ 30 ಡಿಗ್ರಿ ತಾಪಮಾನದಲ್ಲೂ ಮೈ ಚಳಿ ಬಿಟ್ಟು ಸಮರಕಲೆಗಳ ಅಭ್ಯಾಸ ಮಾಡಿದ್ದಾರೆ. ಆ ಮೂಲಕ ತಮ್ಮ ತಾಕತ್ತನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಸೈನಿಕರ ಕಲೆ ಅಭ್ಯಾಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದಕ್ಕೂ ಮೊದಲು ಅಂದರೆ ಕಳೆದ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಇದೇ ಐಟಿಬಿಪಿ ಯೋಧರು ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಲಡಾಖ್ ನಲ್ಲಿ 18 ಸಾವಿರ ಅಡಿ ಎತ್ತರದ ಭೂಮಿ ಮೇಲೆ ನಿಂತು ತ್ರಿವರ್ಣ ಧ್ವಜ ಹಾರಿಸಿ ಸಾಹಸ ಮೆರೆದಿದ್ದರು.
SCROLL FOR NEXT