ಕಾರ್ತಿ ಚಿದಂಬರಂ 
ದೇಶ

ಕಾರ್ತಿ ಚಿದಂಬರಂ ವಿದೇಶ ಪ್ರವಾಸಕ್ಕೆ ಸುಪ್ರೀಂ ಕೋರ್ಟ್ ಅನುಮತಿ, 10 ಕೋಟಿ ರೂ. ಠೇವಣಿ ಇಡಲು ಆದೇಶ

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ವಿದೇಶಕ್ಕೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕಾರ್ತಿ ತಮ್ಮ ನೊಂದಣಿ ಸಹಿತವಾಗಿ....

ನವದೆಹಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ವಿದೇಶಕ್ಕೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕಾರ್ತಿ ತಮ್ಮ ನೊಂದಣಿ ಸಹಿತವಾಗಿ  10 ಕೋಟಿ ರೂ. ಠೇವಣಿ ಇಟ್ಟ ಬಳಿಕ ನ್ಯಾಯಾಲಯ ಅವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ನೀಡಿದೆ.
ಐಎನ್ಎಕ್ಸ್ ಮೀಡಿಯಾ ಮತ್ತು ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾರ್ಚ್ 5, 6, 7 ಮತ್ತು 12 ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳೆದುರು ಕಾರ್ತಿ ಹಾಜರಾಗಬೇಕಾಗಿತ್ತು. ಇದಕ್ಕೆ ಪ್ರತಿಯಾಗಿ ಕಾರ್ತಿ ತಮಗೆ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿಸುವಂತೆ ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ನ್ಯಾಯಾಲಯ "ನೀವು ಕಾನೂನಿನೊಡನೆ ಆಟವಾಡಬೇಡಿ, ಫೆಬ್ರವರಿ 10 ರಿಂದ 26 ರ ನಡುವೆ ನೀವು ಎಲ್ಲಿಗೆ ಹೋಗಬೇಕೆಂದಿದ್ದಿರೋ ಹೋಗಿರಿ.ಆದರೆ ನೀವು ತನಿಖೆಗೆ ಸಹಕರಿಸಬೇಕು" ಎಂದು ಖಡಕ್ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನೊಳಗೊಂಡ ನ್ಯಾಯಪೀಠ ಈ ನಿರ್ದೇಶನ ನಿಡಿದೆ."ನಿಮ್ಮ ಕಕ್ಷಿದಾರರಿಗೆ ವಿಚಾರಣೆಗೆ ಸಹಕರಿಸಲು ಹೇಳಿರಿ. ಅವರು ಸಹಕರಿಸುತ್ತಿಲ್ಲ. ನಾವು ಬಹಳಷ್ಟು ಸಂಗತಿಗಳನ್ನು ಹೇಳಬೇಕೆಂದು ಬಯಸುತ್ತೇವೆ, ನಾವು ಅದನ್ನು ಈಗಲೇ ಹೇಳಲಾರೆವು" ನ್ಯಾಯಪೀಠ ಹೇಳಿದೆ.
ಕಾರ್ತಿ ಕೇವಲ 10 ಕೋಟಿ ರೂ ಠೇವಣಿ ಇಡುವುದಷ್ಟೇ ಅಲ್ಲದೆ ನಿಗದಿಯಾದ ಸಮಯಕ್ಕೆ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುವುದಾಗಿ ಅರ್ಜಿಯಲ್ಲಿ ಬರೆದು ಕೊಡಬೇಕೆಂದೂ ನ್ಯಾಯಾಲಯ ಆದೇಶಿಸಿದೆ.ಕಾರ್ತಿ ಫೆಬ್ರವರಿ 10 ರಿಂದ 26 ರವರೆಗೆ ಮತ್ತು ಮಾರ್ಚ್ 23 ರಿಂದ 31 ರವರೆಗೆವಿದೇಶಕ್ಕೆ ಪ್ರಯಾಣಿಸಲು ನ್ಯಾಯಾಲಯಕ್ಕೆ ಅನುಮತಿ ಬೇಡಿದ್ದರು.
ತಮ್ಮ ಸಂಸ್ಥೆಯ ಅಡಿಯಲ್ಲಿ ಬರುವ ಟೂರ್ಸ್ ಟೆನ್ನಿಸ್ಲಿ. ವತಿಯಿಂದ ಫ್ರಾನ್ಸ್, ಸ್ಪೇನ್, ಜರ್ಮನಿ ಮತ್ತು ಯುನೈಟೆಡ್ ಕಿಂಗ್ ಡಮ್ ಗಳಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಗಳನ್ನಾಯೋಜಿಸುವ ಸಂಬಂಧ ಕಾರ್ತಿ ವಿದೇಶ ಪ್ರಯಣ ಕೈಗೊಳ್ಳುವವರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

SCROLL FOR NEXT