ದೇಶ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 4.78 ಲಕ್ಷಕ್ಕೂ ಹೆಚ್ಚಿನ ಮನೆಗಳ ಮಂಜೂರಾತಿ

Nagaraja AB

ನವದೆಹಲಿ: ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ನಗರ ಪ್ರದೇಶದಲ್ಲಿನ ಬಡವರಿಗಾಗಿ ರಿಯಾಯಿತಿ ದರದಲ್ಲಿ  4 ಲಕ್ಷದ 78 ಸಾವಿರದ 670  ಮನೆಗಳನ್ನು ನಿರ್ಮಿಸಲು ಕೇಂದ್ರ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯ ಇಂದು ಅನುಮೋದನೆ ನೀಡಿದೆ.

ಕೇಂದ್ರಿಯ ಮಂಜೂರಾತಿ ಮತ್ತು ನಿರ್ವಹಣಾ ಸಮಿತಿಯ 42 ನೇ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದ್ದು, ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆಯಡಿ  ಒಟ್ಟಾರೆಯಾಗಿ 7, 265, 763 ಮನೆಗಳನ್ನು ಮಂಜೂರು ಮಾಡಲಾಗಿದೆ.

ನೆರೆಯ ಆಂಧ್ರ ಪ್ರದೇಶಕ್ಕೆ 105, 956 ಮನೆಗಳು, ಪಶ್ಚಿಮ ಬಂಗಾಳಕ್ಕೆ 102,895, ಉತ್ತರ ಪ್ರದೇಶಕ್ಕೆ 91, 689, ತಮಿಳುನಾಡು 68,110, ಮಧ್ಯ ಪ್ರದೇಶ 35, 377, ಕೇರಳ 25, 059, ಮಹಾರಾಷ್ಟ್ರ 17, 817, ಒಡಿಶಾ 12, 290 ಬಿಹಾರ 10, 269 ಮತ್ತು ಉತ್ತರ ಖಂಡ್  ರಾಜ್ಯಕ್ಕೆ 9, 208 ಮನೆಗಳನ್ನು ಅನುಮೋದನೆ ನೀಡಲಾಗಿದೆ.

ವಸತಿ ಮತ್ತು ನಗರ ವ್ಯವಹಾರಗಳ  ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ನೇತೃತ್ವದಲ್ಲಿ ನಡೆದ  ಸಭೆಯಲ್ಲಿ ಒಟ್ಟಾರೇಯಾಗಿ   22, 492 ಕೋಟಿ ರೂ. ವೆಚ್ಚದಲ್ಲಿ 940  ಯೋಜನೆಗಳನ್ನು  ಕೈಗೊಳ್ಳಲು ನಿರ್ಧರಿಸಲಾಯಿತು.

SCROLL FOR NEXT